ಮಡಿಕೇರಿ: ರಾಜ್ಯದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಂದಲೇ ಕೋಮುದ್ವೇಷ ಹೆಚ್ಚುತ್ತಿದೆ. ಅವರು ಪ್ರತಿ ವಿಷಯಕ್ಕೂ ಕೋಮು ಬಣ್ಣ ಬಳಿಯುತ್ತಿದ್ದಾರೆ. ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.
ಮಡಿಕೇರಿಯಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಗ ಅವರು ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಉರ್ದು ಬರಲಿಲ್ಲ ಎಂದು ಚಂದ್ರುನನ್ನು ಚುಚ್ಚಿ ಕೊಂದಿದ್ದಾರೆಂದು ಹೇಳಿದ್ದರು. ಆ ಮೂಲಕ ಕೋಮುದ್ವೇಷ ಹರಡಲು ಮುಂದಾಗಿದ್ದರು. ಆ ತಕ್ಷಣವೇ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು. ಆರಗ ಅವರು ಅರ್ಧಂಬರ್ಧ ಜ್ಞಾನೇಂದ್ರ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್
- Advertisement
- Advertisement
ಹುಬ್ಬಳ್ಳಿಯಲ್ಲಿ ಗಲಭೆ ನಡೆಯುವುದಕ್ಕೆ ಹೊರಗಿನವರು ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರಗ ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ. ಅವರ ಬುದ್ಧಿಶಕ್ತಿ ಸತ್ತು ಹೋಗಿದೆಯಾ? ಈ ಘಟನೆ ನಡೆಯಬೇಕಾದರೆ ಅವರ ಬುದ್ಧಿಶಕ್ತಿ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.
ಆರಗ ಅವರಿಗೆ ಅಧಿಕಾರ ಮಾಡುವುದಕ್ಕೆ ಅರ್ಹತೆಯಿಲ್ಲ. ಅಲ್ಲಿ ಗಲಾಟೆಯಾಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ಇರಲ್ಲಿಲ್ವಾ? ಯಾವುದೇ ಧರ್ಮದವರು ತಪ್ಪು ಮಾಡಿದ್ರು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ