ಶಿವಮೊಗ್ಗ: ಮಾಜಿ ಸಿಎಂ ಎಸ್.ಎಂ ಕೃಷ್ಣ (S.M Krishna) ಅವರು ಬೆಂಗಳೂರನ್ನು (Bengaluru) ಸಿಂಗಾಪುರ ಮಾಡುವ ಕನಸು ಕಂಡಿದ್ದರು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.
Advertisement
ಈ ಬಗ್ಗೆ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಎಸ್.ಎಂ ಕೃಷ್ಣ ಅವರ ಅಗಲಿಕೆಯಿಂದ ನೋವಾಗಿದೆ. ಅವರು ಒಬ್ಬ ಸಜ್ಜನ ರಾಜಕಾರಣಿ ಆಗಿದ್ದರು. ಅವರ ಪತ್ನಿ ಪ್ರೇಮಾ ತೀರ್ಥಹಳ್ಳಿಯವರು, ಅವರು ಇಲ್ಲಿನ ಅಳಿಯ. ಈ ಹಿನ್ನಲೆಯಲ್ಲಿ ನನ್ನ ಮೇಲೆ ವಿಶೇಷ ಪ್ರೀತಿ ಅವರಿಗೆ ಇತ್ತು ಎಂದಿದ್ದಾರೆ.
Advertisement
Advertisement
ಕ್ಷೇತ್ರದ ಯಾವುದೇ ಕಾಮಗಾರಿ ಇದ್ದರೂ ಅವರು ಅನುದಾನ ನೀಡುತ್ತಿದ್ದರು. ರಾಜ್ಯದ ಸಿಎಂ ಆಗಿ ಎಲ್ಲರೂ ನೆನಪು ಇರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರನ್ನು ಸಿಂಗಾಪುರ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಐಟಿ ಬಿಟಿ ಕಂಪನಿಗಳನ್ನು ತಂದು ಬೆಂಗಳೂರಿನ ಅಭಿವೃದ್ಧಿ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
Advertisement
ಕೃಷ್ಣ ಅವರು ಸೌಮ್ಯ ಸ್ವಭಾವದವರು. ಅವರನ್ನು ಕಳೆದುಕೊಂಡು ರಾಜ್ಯವು ಬಡವಾಗಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.