ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿದ ಡ್ರೆಜ್ಜಿಂಗ್ ಹಡಗೊಂದು ಸಮುದ್ರದಲ್ಲಿ ಮುಳುಗುವ ಹಂತದಲ್ಲಿದೆ.
ಮಂಗಳೂರಿನ ಎನ್‍ಎಂಪಿಟಿ ಬಂದರಿನ ನಾಲ್ಕು ಟಗ್ ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅದರಲ್ಲಿರುವ ಕಾರ್ಮಿಕರನ್ನು ರಕ್ಷಿಸಲು ಬಂದರಿನಿಂದ ಬೋಟ್ ಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಂಗಳೂರಿನ ಸುರತ್ಕಲ್ ಬಳಿಯ ಸಮುದ್ರ ತೀರದಲ್ಲಿ ಘಟನೆ ನಡೆದಿದ್ದು 15 ಕಾರ್ಮಿಕರ ರಕ್ಷಣೆಗೆ ಹರಸಾಹಸ ನಡೆಸಲಾಗುತ್ತಿದೆ.
ಭಗವತಿ ಪ್ರೇಮ್ ಹೆಸರಿನ ಡ್ರೆಜ್ಜಿಂಗ್ ಹಡಗು ಇಂದು ಬೆಳಗ್ಗೆ ಬಿರುಕು ಬಿಟ್ಟಿದ್ದು ಸಮುದ್ರಕ್ಕೆ ತೈಲ ಸೋರಿಕೆಯಾಗುತ್ತಿದೆ. ಸದ್ಯಕ್ಕೆ ಹಡಗಿನ ಕಾರ್ಮಿಕರ ರಕ್ಷಣೆಗೆ ಎನ್‍ಎಂಪಿಟಿ ಅಧಿಕಾರಿಗಳು ಮುಂದಾಗಿದ್ದಾರೆ. ಹಡಗು ಸುರತ್ಕಲ್ ಕಡಲ ಕಿನಾರೆಯಿಂದ 3 ಕಿಮೀ ದೂರದಲ್ಲಿದೆ.