– ಆಸ್ಕರ್ ಗೆದ್ದ ಸಂಗೀತ ಮಾಂತ್ರಿಕನ ಹೇಳಿಕೆಗೆ ಬಾಲಿವುಡ್ ಶಾಕ್
ಮುಂಬೈ: ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಮಾಂತ್ರಿಕ, ಎ.ಆರ್. ರೆಹಮಾನ್ (AR Rahman) ಅವರ ಒಂದೇ ಒಂದು ಒಂದು ಹೇಳಿಕೆ ಬಾಲಿವುಡ್‌ನಲ್ಲಿ (Bollywood) ವಿವಾದದ ಅಲೆ ಎಬ್ಬಿಸಿದೆ. ಬಾಲಿವುಡ್‌ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ. ಕೋಮುವಾದಿ ಮನಸ್ಥಿತಿಯೂ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದಾರೆ.
#WATCH | Mumbai: On AR Rahman saying that he has lost work in Bollywood in last 8 years: ‘Maybe it’s a communal thing’ as reported in media, AIMIM national spokesperson Waris Pathan says, “AR Rahman is an internationally acclaimed, renowned music composer. If he said this, then… pic.twitter.com/7fm6KptU1m
— ANI (@ANI) January 16, 2026
ಬಿಬಿಸಿ ಏಷ್ಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತಾಡಿರುವ ರೆಹಮಾನ್, ನಾನು ಕೆಲಸ ಹುಡುಕಿ ಹೋಗಲ್ಲ. ನನ್ನನ್ನ ಅರಸಿ ಬರುವ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರಾಮಾಣಿಕವಾಗಿ ಮಾಡ್ತೇನೆ. 90ರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಈ ರೀತಿಯ ಯಾವುದೇ ಪೂರ್ವಾಗ್ರಹ – ಪಕ್ಷಪಾತ ಇರಲಿಲ್ಲ. ಈಗ ನನ್ನ ಕಿವಿಗೆ ಬಿದ್ದಿದೆ. ಮ್ಯೂಸಿಕ್‌ಕಂಪನಿಯೊಂದು ನಿಮ್ಮನ್ನು ಬದಿಗೊತ್ತಿ ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿದೆ ಅಂದಿದ್ದಾರೆ. ಇದನ್ನೂ ಓದಿ: ಸುಖೀಭವ ಸಿನಿಮಾ ಟೀಸರ್, ಸಾಂಗ್ ರಿಲೀಸ್
ಹೌದಾ.. ಗ್ರೇಟ್.. ಹಾಗಾದರೆ ನಾನು ನನ್ನ ಕುಟುಂಬದ ಜೊತೆ ಸಮಯ ಕಳೀಬೋದು ಅಂದಿದ್ದೆ. ಆದರೆ, ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಗಿದ್ದು, ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸ್ತಿದ್ದಾರೆ. ಇದು ಮತೀಯವಾದವೂ ಇರಬಹುದು ಅಂದಿದ್ದಾರೆ. ರೋಜಾ, ಬಾಂಬೆ, ದಿಲ್‌ಸೇ, ತಾಲ್ ಚಿತ್ರಗಳಂಥ ಎವರ್‌ಗ್ರೀನ್ ಹಾಡು-ಸಂಗೀತ ಕೊಟ್ಟಿದ್ದರೂ ಈಗಲೂ ಅಲ್ಲಿ ನಾನು ಹೊರಗಿನವನಾಗಿದ್ದೇನೆ. ಸಂಗೀತ ದಂತಕಥೆ ಇಳಯರಾಜಾ ಅವರ ಸ್ಥಿತಿಯೂ ಹಾಗೇ ಆಗಿದೆ ಅಂದಿದ್ದಾರೆ. ಇದನ್ನೂ ಓದಿ: ʻನನಗೆ ಸೂರ್ಯಕುಮಾರ್ ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!
ಯಶ್ ʻರಾಮಾಯಣʼ ಚಿತ್ರಕ್ಕೆ ಸಂಗೀತ ಸಂಯೋಜನೆ
ಇದೀಗ ಯಶ್-ರಣಬೀರ್ ಕಪೂರ್ ನಟನೆಯ ರಾಮಾಯಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಸಂದರ್ಶನದಲ್ಲಿ ನೀವು ಮುಸ್ಲಿಂ ಹೆಸರು ಹೊಂದಿದ್ದೀರಿ. ರಾಮಾಯಣ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದರೆ ವಿರೋಧ ಬರೋದಿಲ್ವಾ..? ಅನ್ನೋ ಪ್ರಶ್ನೆಗೆ ಉತ್ತರಿಸಿರುವ ರೆಹಮಾನ್.. ವಿರೋಧ ಬರುತ್ತೆ ಅಂತ ಖಂಡಿತಾ ಹೇಳಲ್ಲ. ಏಕೆಂದರೆ, ನಾನು ಬ್ರಾಹ್ಮಣರ ಶಾಲೆಗಳಲ್ಲೂ ಓದಿದ್ದೇನೆ. ಆ ಶಾಲೆಗಳಲ್ಲಿ ರಾಮಾಯಣ, ಮಹಾಭಾರತಗಳನ್ನ ಬೋಧಿಸುತ್ತಿದ್ದರು. ನನಗೆ ತುಂಬಾ ಚೆನ್ನಾಗಿ ಆ ಕಥೆಗಳು ಗೊತ್ತು. ಇವು ಒಳ್ಳೆ ವ್ಯಕ್ತಿಗಳು, ಮೌಲ್ಯಗಳು, ಸಿದ್ಧಾಂತಗಳನ್ನು ಒಳಗೊಂಡಿವೆ. ಜನ ಈ ಬಗ್ಗೆ ಚರ್ಚೆ ಮಾಡ್ಬೋದು. ಆದರೆ, ನಾನು ಎಲ್ಲಾ ಒಳ್ಳೇತನಗಳನ್ನ ಗೌರವಿಸ್ತೇನೆ. ಒಳ್ಳೇತನ… ಒಳ್ಳೇ ವಿಷಯಗಳನ್ನು ಎಲ್ಲಾ ಕಡೆಯಿಂದಲೂ ಕಲಿಯಬೇಕು ಅಂದಿದ್ದಾರೆ.


