ಮುಂಬೈ: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಪ್ರತಿಕ್ರಿಯಿಸಿದ್ದು, ಇದು ನನ್ನ ಭಾರತವಲ್ಲ. ನನಗೆ ಅಭಿವೃದ್ಧಿಯ ಪಥದತ್ತ ಸಾಗುವ ದೇಶವನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಗೌರಿ ಅವರ ಹತ್ಯೆ ನನಗೆ ಅತೀವ ದುಃಖವನ್ನು ತರಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡೆಯದಿರಲಿ. ಈ ರೀತಿಯ ಘಟನೆಗಳು ನಡೆದರೆ ಇದು ನನ್ನ ದೇಶವಲ್ಲ. ನನ್ನ ಭಾರತ ಯಾವಾಗಲೂ ಪ್ರಗತಿಪರ ವಿಚಾರ ಮತ್ತು ಶಾಂತಿಯುತ ದೇಶವಾಗಲಿ ಎಂದು ರೆಹಮಾನ್ ಆಶೀಸಿದರು.
Advertisement
ಆಸ್ಕರ್ ವಿಜೇತ ರೆಹಮಾನ್ ತಮ್ಮ ಮುಂದಿನ ಸಿನಿಮಾ `ಒನ್ ಹಾರ್ಟ್: ದ ಎ.ಆರ್.ರೆಹಮಾನ್ ಕನ್ಸರ್ಟ್ ಫಿಲ್ಮ್’ ಪ್ರಚಾರದ ತೊಡಗಿದ್ದಾರೆ. ಒನ್ ಹಾರ್ಟ್‍ನ ಇದು ಉತ್ತರ ಅಮೆರಿಕಾದ 14 ನಗರಗಳ ಕುರಿತಾದ ಕಥೆಯನ್ನು ಹೊಂದಿದೆ. ಇದೂವೆರೆಗೂ ಭಾರತದಲ್ಲಿ ಆ್ಯಕ್ಷನ್, ರೋಮ್ಯಾಂಟಿಕ್, ಕಾಮಿಡಿ, ಥ್ರಿಲರ್ ಕಥಾನಕವುಳ್ಳ ಸಿನಿಮಾಗಳನ್ನು ನೋಡಿದಾಗಿದೆ. ಇದೊಂದು ಸಂಗೀತಮಯ ಸಿನಿಮಾ ಆಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ.
Advertisement
ದೇಶಾದ್ಯಂತ ಸದ್ದು ಮಾಡಿದ್ದ ಗೌರಿ ಲಂಕೇಶ್ ಹತ್ಯೆಗೆ ದೇಶದ ಅನೇಕ ಗಣ್ಯರು ಖಂಡಿಸಿದ್ದಾರೆ. ಸೆಪ್ಟಂಬರ್ 5ರ ರಾತ್ರಿ ಅವರ ಮನೆಯ ಮುಂದೆಯೇ ಹಂತಕರು ಗುಂಡು ಹಾರಿಸಿ ಕೊಲೆಗೈದಿದ್ದರು.
Advertisement
Advertisement