ಸಿನಿಮಾ ಕಲಾವಿದರು, ಸೆಲೆಬ್ರಿಟಿ, ಸ್ಟಾರ್‌ಗಳು ಧರಿಸಿದ ಬಟ್ಟೆಯನ್ನು ಅಭಿಮಾನಿಗಳು ಹಾಗೂ ಆಸಕ್ತರು ದುಬಾರಿ ಹಣಕ್ಕೆ ಖರೀದಿ ಮಾಡುತ್ತಾರೆ. ಬಟ್ಟೆ ಸಂಗ್ರಹ ಮಾಡುವುದು ಹಲವರಿಗೆ ಕ್ರೇಜ್ ಆಗಿದೆ. ಆದರೆ ಈ ಬಟ್ಟೆಯನ್ನು ಸೆಲ್ ಮಾಡುವುದರ ಹಿಂದಿನ ಉದ್ದೇಶವೇ ಬೇರೆ ಇರುತ್ತದೆ. ಹೌದು ಇತ್ತೀಚೆಗಷ್ಟೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಬಟ್ಟೆಯನ್ನು ಲಕ್ಷ, ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
Advertisement
ಎ.ಆರ್.ರೆಹಮಾನ್ ತೊಟ್ಟಿದ್ದ ಉಡುಪು 6.75 ಲಕ್ಷಕ್ಕೆ ಹರಾಜಾಗಿದೆ. ಪ್ರಮೋದ್ ಸುರಾಡಿಯಾ ಅವರು ಹರಾಜಿನಲ್ಲಿ ಬಟ್ಟೆಯನ್ನು ಖರೀದಿ ಮಾಡಿದ್ದಾರೆ. ಬಳಕೆ ಮಾಡಿ ಬಿಟ್ಟಿರುವ ಬಟ್ಟೆಯನ್ನು ಹರಾಜು ಮಾಡಿ ಎ.ಆರ್.ರೆಹಮಾನ್ ಆ ಹಣವನ್ನು ಏನು ಮಾಡಿದರು ಎನ್ನುವುದರ ಹಿಂದೆ ಅಚ್ಚರಿಯ ಸ್ಟೋರಿ ಕೂಡ ಇದೆ.
Advertisement
Advertisement
ರಾಜಸ್ಥಾನ ಕಾಸ್ಮೋ ಕ್ಲಬ್ ಫೌಂಡೇಶನ್‌ನ 28ನೇ ಸಂಸ್ಥಾಪಕರ ದಿನಾಚರಣೆಯನ್ನು ಇತ್ತೀಚೆಗೆ ಆಳ್ವಾರ್ಪೇಟೆ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಮಿಳುನಾಡು ಕೈಮಗ್ಗ ಸಚಿವ ಆರ್.ಗಾಂಧಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಟ್ಟೆಯನ್ನು ಖರೀದಿಸಲು ಅಶಕ್ತರಾದವರಿಗೆ ಸಹಾಯ ಮಾಡುವ ಯೋಜನೆಯಡಿ, ಸಹಾಯವಾಗಲಿ ಎಂದು ಎ.ಆರ್. ರೆಹಮಾನ್ ಧರಿಸಿದ್ದ ಉಡುಪನ್ನು ಹರಾಜು ಹಾಕುವುದಾಗಿ ಹೇಳಿದ್ದರು.
Advertisement
ಆರ್ಥಿಕವಾಗಿ ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಹರಾಜಿಗೆ ಹಾಕಲಾಗಿದ್ದ ಎಆರ್ ರೆಹಮಾನ್ ಧರಿಸಿದ್ದ ಉಡುಗೆ 6.75 ಲಕ್ಷ ರೂ.ಗೆ ಮಾರಾಟವಾಗಿದೆ. ಪ್ರಮೋದ್ ಸುರಾಡಿಯಾ ಅವರು ಈ ಉಡುಪನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಹರಾಜಿನ ಉದ್ದೇಶಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ : ಡಿಕೆಶಿ ಪ್ರಶ್ನೆ
ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್.ರೆಹಮಾನ್ ಭಾರತೀಯ ಚಿತ್ರ ಸಂಗೀತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದವರು. 2009ರಲ್ಲಿ ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎರಡೆರಡು ಆಸ್ಕರ್ ಪ್ರಶಸ್ತಿ ಪಡೆದ ಪ್ರತಿಭಾವಂತ ಸಂಗೀತ ಸಂಯೋಜಕರು. ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ಕೊಟ್ಟ ಇವರು ಸಾಮಾಜಿಕ ಕಾರ್ಯಕ್ಕೂ ಮುನ್ನೆಲೆಗೆ ಬಂದಿರುವುದು ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್