ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ (Sikandar) ಸಿನಿಮಾದ ಟೀಸರ್ ಹಾಗೂ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ತುಣುಕುಗಳನ್ನು ರಿಮೇಕ್ ಎಂದು ಕಾಲೆಳೆದವರಿಗೆ ನಿರ್ದೇಶಕ ಎ.ಆರ್ ಮುರುಗದಾಸ್ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಬೆಡಗಿ ಶ್ರೀಲೀಲಾಗೆ ಮೆಗಾಸ್ಟಾರ್ ಕಡೆಯಿಂದ ಸ್ಪೆಷಲ್ ಗಿಫ್ಟ್
‘ಸಿಕಂದರ್’ ಸಿನಿಮಾದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಈ ಚಿತ್ರವನ್ನ ತಮಿಳಿನ ಸರ್ಕಾರ್ ಸಿನಿಮಾಗೆ ಹೋಲಿಸಿ ಟೀಕಿಸಿದ್ದರು. ಸರ್ಕಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಎ.ಆರ್ ಮುರುಗದಾಸ್. ಹಾಗಾಗಿ ವಿಜಯ್ ದಳಪತಿ ನಟನೆಯ ‘ಸರ್ಕಾರ್’ ಕಥೆಗೆ ಮಸಾಲೆ ಸೇರಿಸಿ ಕೊಂಚ ಸ್ಟೋರಿ ಚೇಂಜ್ ಮಾಡಿ ಸಿನಿಮಾ ತೋರಿಸಲು ಹೊರಟಿದ್ದಾರೆ ಎಂದು ಕುಟುಕಿದವರಿಗೆ ಎ.ಆರ್ ಮುರುಗದಾಸ್ (A.R Murugadoss) ಅವರು ‘ಸಿಕಂದರ್’ ಚಿತ್ರ ರಿವೇಕ್ ಸಿನಿಮಾ ಅಲ್ಲವೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಸಿಕಂದರ್’ ಸಿನಿಮಾ ಸಲ್ಮಾನ್ ಖಾನ್ ಸಲುವಾಗಿಯೇ ತಾವು ಹೊಸ ಕಥೆ ಬರೆದಿರುವುದಾಗಿ ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಅಂದಹಾಗೆ, ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ವರ್ಷ ಈದ್ ಹಬ್ಬದಂದು ಈ ಚಿತ್ರ ರಿಲೀಸ್ ಆಗಲಿದೆ.