ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಏನಾದ್ರು ಆಯೋಜನೆ ಮಾಡುವಾಗ ಸಂಬಂಧಪಟ್ಟವರು ಲಿಖಿತ ಅನುಮತಿ ನೀಡಬೇಕು ಅಥವಾ ಯಾರಾದ್ರೂ ಹೊರಗಿನವರು ಕಾರ್ಯಕ್ರಮ ಮಾಡೋವಾಗ ಬಾಡಿಗೆ ನೀಡಬೇಕು. ಆದ್ರೆ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿರುವ ಈಜುಕೊಳದಲ್ಲಿ ಪಾರ್ಟಿ ಮಾಡಲು ಪ್ರಾಂಶುಪಾಲರಾದ ಕೃಷ್ಣಸ್ವಾಮಿ ಯಾವುದೇ ಲಿಖಿತ ಅನುಮತಿ ನೀಡದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಲಾಗಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
Advertisement
ಇಂದು ಈ ಕಾರ್ಯಕ್ರಮ ಇದೆ ಅಂತ ಆಯೋಜಕರು ಮಾಧ್ಯಗಳಿಗೆ ಆಹ್ವಾನ ನೀಡಿದ್ರು. ಆದ್ರೆ ಮಾಧ್ಯಮದವರು ಅಲ್ಲಿ ಹೋದಾಗ ಅಲ್ಲಿನ ಪ್ರಾಂಶುಪಾಲರಾದ ಕೃಷ್ಣಸ್ವಾಮಿ ಗಲಿಬಿಲಿಗೆ ಒಳಗಾಗಿ, ನನಗೆ ಈ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಅನುಮತಿ ಕೊಟ್ಟಿದ್ದೆ. ಈಗ ಕಾರ್ಯಕ್ರಮ ನಡೆಸಲ್ಲ ಎಂದು ಮಾಧ್ಯಮದವರನ್ನ ಸಾಗಹಾಕಿದ್ರು. ಹೀಗಾಗಿ ಮಾಧ್ಯಮದವರು ಹಿಂದಿರುಗಿದ್ದಾರೆ. ಆದ್ರೆ ಆ ಬಳಿಕ ಜುಲೈ 29ರಂದು ಸಂಜೆ ಅನುಮತಿ ನೀಡಿದ್ದಾರೆ. ಯಾಕೆ ಈ ರೀತಿ ನಮ್ಮನ್ನ ದೂರ ಇಟ್ರು ಅಂತ ಮಾಧ್ಯಮ ಮಂದಿ ಹುಡುಕಾಡಿದಾಗ ಅಲ್ಲಿನ ಪಾರ್ಟಿಗೆ ಕೇವಲ ಮೌಖಿಕ ಅನುಮತಿ ನೀಡಲಾಗಿದೆಯೆಂದು ತಿಳಿದುಬಂತು. ಈ ಬಗ್ಗೆ ಪಬ್ಲಿಕ್ ಟಿವಿ ವಿವಿಯ ಪ್ರಾಂಶುಪಾಲ ಕೃಷ್ಣಸ್ವಾಮಿಯರನ್ನು ಪ್ರಶ್ನಿಸಿದಾಗ, ಕಾರ್ಯಕ್ರಮ ನಿಲ್ಲಿಸುತ್ತೇವೆ ಅಂದ್ರು. ಆದ್ರೆ ಅಂದು ಕಾರ್ಯಕ್ರಮ ನಡೆದಿದೆ. ಹೇಗೆ ಅನುಮತಿ ನೀಡಿದ್ರಿ ಅಂದ್ರೆ ಮೌಖಿಕವಾಗಿಯೇ ಅನುಮತಿ ಕೊಟ್ಟೆ ಅನ್ನೋದು ಬಿಟ್ಟು ಬೇರೆ ಮಾತಾಡಲ್ಲ ಪ್ರಾಂಶುಪಾಲ ಕೃಷ್ಣಸ್ವಾಮಿ.
Advertisement
Advertisement
ಲಿಖಿತ ಆದೇಶ ಎಲ್ಲಿ ಅಂದ್ರೆ ಯಾವುದೋ ಪ್ರಿಂಟ್ ತಂದು ತೊರಿಸ್ತಾರೆ. ಅದು ಅಲ್ಲಿಯೇ ಸಹಿ ಮಾಡಿದ್ದು. ಮೌಖಿಕ ಆದೇಶ ಅಂದ್ರಿ ಇದೆಲ್ಲಿಂದ ಬಂತು? ಅಂತ ಕೇಳಿದ್ರೆ ಮತ್ತೆ ಗಲಿಬಿಲಿಯಾಗ್ತಾರೆ. ಇನ್ನು ಈ ಬಗ್ಗೆ ರಿಜಿಸ್ಟ್ರಾರ್ ರವಿಯವರನ್ನ ಕೇಳಿದ್ರೆ ಇದಕ್ಕೂ ನನಗೂ ಸಂಬಂಧ ಇಲ್ಲ. ಕೃಷ್ಣಸ್ವಾಮಿಯನ್ನ ಕೇಳಿ ಅಂತಾರೆ. ಏನೋ ಕೊಡ್ತೀವಿ ಸುಮ್ಮನಾಗಿ ಸರ್ ಅಂತ ಹಣದ ಆಮಿಷ ಬೇರೆ ನೀಡ್ತಾರೆ ಈ ಪ್ರಿನ್ಸಿಪಾಲ್.
Advertisement
ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಅಕ್ರಮ ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ರೂ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿಶ್ವವಿದ್ಯಾಲಯದ ಈಜುಕೊಳ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಅಂತ ಇರೋದು. ಅದರಲ್ಲಿ ಕಾರ್ಯಕ್ರಮ ಮಾಡೋದೇ ಆದ್ರೆ ಅನುಮತಿಯ ಮೇರೆಗೆ ಆಗಬೇಕು. ಆದ್ರೆ ಈ ರೀತಿ ತಪ್ಪು ಮಾಡಿದೋರ ವಿರುದ್ಧ ಕ್ರಮ ಯಾವಾಗ ಅನ್ನೊದೇ ಪ್ರಶ್ನೆ.