– ಬೆಳಗಾವಿಯ 14 ಜನರಿಗೆ ಸೋಂಕು
– ದಾವಣಗೆರೆಯಲ್ಲಿ ಮತ್ತೊಬ್ಬರಿಗೆ ಕೊರೊನಾ
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಅದೇ. ಇಂದು 22 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ ಕಂಡಿದೆ.
ಬೆಳಗಾವಿಯಲ್ಲಿ ಇಂದು ಒಟ್ಟು 14 ಜನರಿಗೆ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಹಾಟ್ಸ್ಪಾಟ್ ತಾಲೂಕು ಹಿರೇಬಾಗೇವಾಡಿಯಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ ಮೂವರಿಗೆ, ವಿಜಯಪುರದಲ್ಲಿ ಇಬ್ಬರಿಗೆ, ತುಮಕೂರು, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ತಗುಲಿದೆ.
Advertisement
Advertisement
ದಾವಣಗೆರೆಯಲ್ಲಿ ನಿನ್ನೆಯಷ್ಟೇ ಸ್ಟಾಪ್ ನರ್ಸ್ಗೆ ಸೋಂಕು ಪತ್ತೆಯಾಗಿತ್ತು. ಇಂದು ದಾವಣಗೆರೆಯ ಜಾಲಿನಗರದ ನಿವಾಸಿ 68 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Advertisement
ವೃದ್ಧ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏಪ್ರಿಲ್ 27ರಂದು ದಾಖಲಾಗಿದ್ದರು. ಮುಂಜಾಗ್ರತ ಕ್ರಮ ಕೈಗೊಂಡಿದ್ದ ವೈದ್ಯರು ಅವರನ್ನು ಪ್ರತ್ಯೇಕವಾಗಿರಿಸಿದ ಚಿಕಿತ್ಸೆ ಕೊಡುತ್ತಿದ್ದರು. ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನಿನ್ನೆ ದಾವಣಗೆರೆಯಲ್ಲಿ ಸೋಂಕು ಪತ್ತೆಯಾದ ಸ್ಟಾಪ್ ನರ್ಸ್ಗೂ ಈಗ ಪತ್ತೆಯಾದ ವೃದ್ಧನಿಗೂ ಯಾವುದೇ ಸಂಬಂಧವಿಲ್ಲ.
Advertisement
ವೃದ್ಧನ ಕುಟುಂಬದ ಒಂದೂವರೆ ವರ್ಷದ ಮಗು, 3 ವರ್ಷದ ಮಗು ಸೇರಿ ಒಟ್ಟು ಒಂಬತ್ತು ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಎಲ್ಲರ ರಕ್ತ ಹಾಗೂ ಥ್ರೋಟ್ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ಗೆ ಕಳುಹಿಸಲಾಗಿದೆ. ಜೊತೆಗೆ ಜಾಲಿನಗರ ಸೀಲ್ಡೌನ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಸೋಂಕಿತರ ವಿವರ:
1. ರೋಗಿ-536: ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ. ರೋಗಿ-501ರ ಸಂಪರ್ಕದಲ್ಲಿದ್ದರು.
2. ರೋಗಿ-537: ವಿಜಯಪುರದ 62 ವರ್ಷದ ವೃದ್ಧ. ರೋಗಿ-221ರ ಸಂಪರ್ಕ ಹೊಂದಿದ್ದರು.
3. ರೋಗಿ-538: ವಿಜಯಪುರದ 33 ವರ್ಷದ ಮಹಿಳೆ. ರೋಗಿ-221ರ ಸಂಪರ್ಕದಲ್ಲಿದ್ದರು.
4. ರೋಗಿ-539: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-469, 483 ಮತ್ತು 484ರ ದ್ವಿತೀಯ ಸಂಪರ್ಕದಲ್ಲಿದ್ದರು.
5. ರೋಗಿ-540: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಪುರುಷ. ರೋಗಿ-483 ದ್ವಿತೀಯ ಸಂಪರ್ಕ ಹೊಂದಿದ್ದರು.
6. ರೋಗಿ-541: ಬೆಳಗಾವಿ ಜಿಲ್ಲೆ ಹುಕ್ಕೇರಿಯ 09 ವರ್ಷದ ಬಾಲಕ. ರೋಗಿ-293ರ ಸಂಪರ್ಕದಲ್ಲಿ ಇದ್ದರು.
7. ರೋಗಿ-542: ಬೆಳಗಾವಿ ಜಿಲ್ಲೆ ಹುಕ್ಕೇರಿಯ 75 ವೃದ್ಧೆ. ರೋಗಿ-293ರ ಸಂಪರ್ಕದಲ್ಲಿ ಇದ್ದರು.
8. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
9. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 18 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
10. ರೋಗಿ-545: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 48 ವರ್ಷದ ಮಹಿಳೆ. ರೋಗಿ-494ರ ದ್ವಿತೀಯ ಸಂಪರ್ಕದಲ್ಲಿದ್ದರು.
11. ರೋಗಿ-546: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 50 ವರ್ಷದ ಪುರುಷ. ರೋಗಿ-483ರ ದ್ವಿತೀಯ ಸಂಪರ್ಕ ಹೊಂದಿದ್ದರು.
12. ರೋಗಿ-547: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಮಹಿಳೆ. ರೋಗಿ-496 ಮತ್ತು 494ರ ದ್ವಿತೀಯ ಸಂಪರ್ಕದಲ್ಲಿದ್ದರು.
13. ರೋಗಿ-548: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 43 ವರ್ಷದ ಪುರುಷ. ರೋಗಿ-484ರ ದ್ವಿತೀಯ ಸಂಪರ್ಕ ಹೊಂದಿದ್ದರು.
14. ರೋಗಿ-549: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 16 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
Covid19: Morning Bulletin
Total Confirmed Cases: 557
Deceased: 21
Recovered:223
New Cases: 22
Other information: Telemedicine facility, Instructions to Tablighi Jamaat Attendees, Corona Watch Application and Helpline details.#ಮನೆಯಲ್ಲೇಇರಿ#KarnatakaFightsCorona@BSYBJP pic.twitter.com/9eZlaKchTb
— CM of Karnataka (@CMofKarnataka) April 30, 2020
15. ರೋಗಿ-550: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಮಹಿಳೆ. ರೋಗಿ-496ರ ದ್ವಿತೀಯ ಸಂಪರ್ಕದಲ್ಲಿದ್ದರು.
16. ರೋಗಿ-551: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 08 ವರ್ಷದ ಬಾಲಕಿ. ರೋಗಿ-293ರ ಸಂಪರ್ಕದಲ್ಲಿದ್ದರು.
17. ರೋಗಿ-552: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಪುರುಷ. ರೋಗಿ-496ರ ಸಂಪರ್ಕದಲ್ಲಿದ್ದರು.
18. ರೋಗಿ-553: ತುಮಕೂರಿನ 65 ವರ್ಷದ ವೃದ್ಧೆ. ರೋಗಿ-535ರ ಸಂಪರ್ಕದಲ್ಲಿದ್ದರು.
19. ರೋಗಿ-554: ಬೆಂಗಳೂರಿನ 20 ವರ್ಷದ ಯುವಕ. ಕಂಟೈನ್ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು.
20. ರೋಗಿ-555: ಬೆಂಗಳೂರಿನ 28 ವರ್ಷದ ಪುರುಷ. ಕಂಟೈನ್ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು.
21. ರೋಗಿ-556: ದಾವಣಗೆರೆಯ 69 ವರ್ಷದ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.
22. ರೋಗಿ-557: ಬೆಂಗಳೂರಿನ 63 ವರ್ಷಸ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.