– ಕಲಬುರಗಿಯ ಮಹಿಳೆಯಿಂದ 6 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಇಂದು 8 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮವು ಕಲಬುರಗಿಯ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ.
ಕಲಬುರಗಿಯಲ್ಲಿ ರೋಗಿ-425 (26 ವರ್ಷದ ಮಹಿಳೆ)ಯಿಂದ 6 ಮಂದಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಉಳಿದಂತೆ ಬೆಂಗಳೂರು ಹಾಗೂ ಗದಗ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.
Advertisement
Advertisement
ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಸದ್ಯ ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿದೆ.
Advertisement
Advertisement
ಸೋಂಕಿತರ ವಿವರ:
1. ರೋಗಿ-513: ಬೆಂಗಳೂರಿನ 48 ವರ್ಷ ಪುರುಷ. ಬಿಬಿಎಂಪಿ ವಾರ್ಡ್-135ರ ಕಂಟೈನ್ಮೆಂಟ್ ಝೋನ್ ಸಂಪರ್ಕ ಹೊಂದಿದ್ದರು.
2. ರೋಗಿ-514: ಗದಗಿನ 75 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಸೋಂಕು.
3. ರೋಗಿ-515: ಕಲಬುರಗಿಯ 55 ವರ್ಷದ ಪುರುಷ. ರೋಗಿ-425ರ ಸಂಪರ್ಕದಲ್ಲಿದ್ದರು.
4. ರೋಗಿ-516: ಕಲಬುರಗಿಯ 40 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿ ಇದ್ದರು.
5. ರೋಗಿ-517: ಕಲಬುರಗಿಯ 43 ವರ್ಷದ ಪುರುಷ. ರೋಗಿ-425ರ ಸಂಪರ್ಕ ಹೊಂದಿದ್ದರು.
6. ರೋಗಿ-518: ಕಲಬುರಗಿಯ 28 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
7. ರೋಗಿ-519: ಕಲಬುರಗಿಯ 45 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
8. ರೋಗಿ-520: ಕಲಬುರಗಿಯ 22 ವರ್ಷದ ಮಹಿಳೆ. ರೋಗಿ-425ರ ಸಂಪರ್ಕ ಹೊಂದಿದ್ದರು.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 8 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 520ಕ್ಕೆ ಏರಿದೆ. ಇದುವರೆಗೆ ಒಟ್ಟು 198 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #ಮನೆಯಲ್ಲೇಇರಿ pic.twitter.com/TCTx6UhB2l
— B Sriramulu (@sriramulubjp) April 28, 2020
ರಾಜ್ಯದಲ್ಲಿ ಈವರೆಗೂ 520 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಪೈಕಿ 20 ಮಂದಿ ಮೃತಪಟ್ಟಿದ್ದು, 198 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.