ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ (Puneeth Rajkumar) ಅಗಲಿ ನಾಳೆಗೆ ಎರಡು ವರ್ಷ. ಪುಣ್ಯ ಸ್ಮರಣೆಯನ್ನು (Punyasmarane) ಆಚರಿಸಲು ಅಭಿಮಾನಿಗಳು ಮತ್ತು ಕುಟುಂಬ ಸರ್ವಸಿದ್ಧತೆ ಮಾಡಿಕೊಂಡಿದೆ. ನಾಳೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೈಸೂರು ಮಾದರಿಯಲ್ಲೇ ಲೈಟಿಂಗ್ ಸೇರಿದಂತೆ ನೇತ್ರದಾನ, ಅನ್ನದಾನ ಶಿಬಿರಗಳನ್ನೂ ಏರ್ಪಡಿಸಿದ್ದಾರೆ.
Advertisement
ಕುಟುಂಬವು ಡಾ.ರಾಜಕುಮಾರ್ ಸಮಾಧಿ ಮಾದರಿಯಲ್ಲೇ ಅಪ್ಪು (Appu) ಸಮಾಧಿಯನ್ನು ನಿರ್ಮಾಣ ಮಾಡಿದೆ. ಬಿಳಿ ಮಾರ್ಬಲ್ಸ್ ಬಳಸಿಕೊಂಡು ಅಪ್ಪು ಸಮಾಧಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಸುತ್ತಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಸಮಾಧಿ ಮೇಲೆ ಅಪ್ಪುವಿನ ನಗುಮೊಗದ ಫೋಟೋ ಇಡಲಾಗಿದೆ.
Advertisement
Advertisement
ಮಾಹಿತಿಯಂತೆ ನಾಳೆ ಬೆಳಗ್ಗೆ 9 ಗಂಟೆಗೆ ಡಾ.ರಾಜ್ ಕುಟುಂಬ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದೆ. ಅಶ್ವಿನಿ (Ashwini) ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಡಾ.ರಾಜಕುಮಾರ್ ಅವರ ಇಡೀ ಕುಟುಂಬ ಪೂಜೆಯಲ್ಲಿ ಭಾಗಿಯಾಗಲಿದೆ.
Advertisement
ಅಕ್ಟೋಬರ್ 29ರಂದು ಪುನೀತ್ ಅವರನ್ನು ಈ ನಾಡು ಕಳೆದುಕೊಂಡಿತು. ಅಲ್ಲಿಂದ ಈವರೆಗೂ ಅಪ್ಪು ಸಮಾಧಿಗೆ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ರಾಜ್ಯಾದ್ಯಂತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರಕಾರ ಕೂಡ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.
Web Stories