ಪವನ್ ಕುಮಾರ್ (Pawan Kumar) ನಿರ್ದೇಶನದ ‘ಧೂಮಂ’ (Dhoomam) ಫಹಾದ್ ಫಾಸಿಲ್ (Fahadh Faasil)ನಟಿಸಿದ ಸಿನಿಮಾದ ಈ ಕತೆ ಸಿಗರೇಟು, ತಂಬಾಕು ಈ ರೀತಿಯ ಸುತ್ತ ನಡೆಯುತ್ತದೆ. ಅದಕ್ಕೊಂದು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ ಪವನ್. ಬಹುಶಃ ಸಿಗರೇಟು, ತಂಬಾಕು ಈ ವಿಷಯದಿಂದಲೇ ಇಮೇಜ್‌ಗೆ ಧಕ್ಕೆಯಾಗುತ್ತದೆಂದು ತಿಳಿದು ಅವರ ಆಪ್ತರು ನೋ ಎಂದಿದ್ದಾರೆ.
Advertisement
ಅದೇನೆ ಇರಲಿ ಕೊನೆಗೂ ಅದೇ ಪವನ್ ಕತೆಯ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು ಅಪ್ಪು (Puneeth Rajkumar). ಹಾಗೆ ನೋಡಲು ಹೋದರೆ ಇದೂ ಮಲಯಾಳಂ ಹಾಗೂ ಕನ್ನಡದಲ್ಲಿ ತಯಾರಾಗಬೇಕಿತ್ತು. ಮಲಯಾಳಂನಲ್ಲಿ ಫಹಾದ್, ಕನ್ನಡದಲ್ಲಿ ಅಪ್ಪು ನಟಿಸಲು ಮಾತು ಕತೆ ಆಗಿತ್ತು ಎನ್ನುತ್ತದೆ ಒಂದು ಮೂಲ.
Advertisement
Advertisement
‘ಫಹಾದ್ ಮೊದಲು ನಟಿಸಲಿ. ಅವರು ಹೇಗೆ ನಟಿಸುತ್ತಾರೆಂದು ನೋಡಿ ಆಮೇಲೆ ನಮ್ಮ ಶೆಡ್ಯೂಲ್ ಪ್ಲಾನ್ ಮಾಡೋಣ. ಅವರಂತೆ ನಟಿಸಲು ನನಗೆ ಸಾಧ್ಯವೆ ಎನ್ನುವುದಷ್ಟೇ ನಂಗೆ ಬೇಕು’ ಎಂದು ವಿನೀತರಾಗಿ ಹೇಳಿದ್ದರು ಅಪ್ಪು. ಅದು ಅವರ ದೊಡ್ಡ ಗುಣ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು
Advertisement
ದ್ವಿತ್ವ ಚಿತ್ರಕ್ಕಾಗಿ ತಾರಾಗಣದಿಂದ ಹಿಡಿದು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು ಪವನ್. ಆದರೆ ಅರ್ಧ ಊಟ ಮುಗಿಸಿ ಅಪ್ಪು ಕೈ ತೊಳೆದುಕೊಂಡರು. ಆಗಲೇ ಪವನ್ ದ್ವಿತ್ವ ಕತೆಯನ್ನು ಅಲ್ಲಲ್ಲೇ ಇಟ್ಟರು. ಧೂಮಂ ಕೈಗೆತ್ತಿಕೊಂಡರು. ಫಹಾದ್ ನಟಿಸಿದ ಈ ಚಿತ್ರ ಕುತೂಹಲ ಮೂಡಿಸಿದೆ. ಅಕಸ್ಮಾತ್ ಅಪ್ಪು ಇದ್ದಿದ್ದರೆ ಮೊದಲ ದಿನ ಮೊದಲ ಶೋ ನೋಡುತ್ತಿದ್ದರೇನೊ ?
ಒಬ್ಬ ಸ್ಟಾರ್ ಈ ರೀತಿ ಕಣ್ಣ ಮುಂದೆಯೇ ದೇವರ ದೀಪವಾದರೆ ಯರ‍್ಯಾರದೊ ಕನಸು? ಯಾರ‍್ಯಾರದೊ ಮನಸು ಒದ್ದಾಡುತ್ತದೆ. ಕಂಗಲಾಗುತ್ತದೆ. ಜನರನ್ನು ಪ್ರೀತಿಸುವ, ಸಿನಿಮಾಕ್ಕಾಗಿ ನಿದ್ದೆ ಕೆಡುವ, ಎಲ್ಲರಿಗೂ ಒಳಿತನ್ನೇ ಬಯಸುವ ಮನಸು ನಮಗೆ ಅನ್ಯಾಯ ಮಾಡಬಾರದಿತ್ತು. ಆದರೆ ದೇವರು ಮೊದಲೇ ಎಲ್ಲವನ್ನೂ ನಿರ್ಧರಿಸಿಬಿಟ್ಟಿದ್ದನೇನೊ? ಹಗಲು ಹೊತ್ತಲ್ಲೇ ನಂದಾದೀಪವನ್ನು ಹೊತ್ತುಕೊಂಡು ಹೋಗಿ ಬಿಟ್ಟ.
ಇನ್ನು ಅನೇಕ ಸಿನಿಮಾ ಕನಸುಗಳನ್ನು ಕಂಡಿದ್ದರು ಅಪ್ಪು. ಅದೆಲ್ಲವನ್ನು ಪತ್ನಿ ಅಶ್ವಿನಿ ಮುಂದುವರೆಸಲು ಸಜ್ಜಾಗಿದ್ದಾರೆ. ಪಿಆರ್‌ಕೆ ಬ್ಯಾನರ್ ಮತ್ತೆ ಮೆರವಣಿಗೆ ಹೊರಡಲಿದೆ. ಅಪ್ಪು ಜೊತೆಜೊತೆಯಲ್ಲಿ ಇದ್ದೇ ಇರುತ್ತಾರೆ. ಅನವರತ.