ಪುನೀತ್ ರಾಜ್‌ಕುಮಾರ್(Puneeth Rajkumar) ಕರ್ನಾಟಕ ಮಾತ್ರವಲ್ಲ, ದೇಶದ ಗಾಡಿ ದಾಟಿ ಕೂಡ ಅಭಿಮಾನಿಗಳಿದ್ದಾರೆ. ಇದೀಗ ದೂರದ ದೇಶದ ಆಸ್ಟ್ರೇಲಿಯಾದಲ್ಲಿ ಪುನೀತ್ ಸ್ಮರಣಾರ್ಥವಾಗಿ ʻಅಪ್ಪು ಪಾರ್ಕ್ʼ ಎಂದು ಹೆಸರಿಟ್ಟಿದ್ದಾರೆ.
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ದೇಶ, ಭಾಷೆ ಮೀರಿ ಅಪಾರ ಅಭಿಮಾನಿಗಳಿದ್ದಾರೆ. ಸಾಕಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ಪುನೀತ್‌ಗೆ ತಮ್ಮದೇ ರೀತಿಯಲ್ಲಿ ಆಸ್ಟ್ರೇಲಿಯಾದ ಕನ್ನಡದ ಅಭಿಮಾನಿಗಳು ಗೌರವ ಸೂಚಿಸಿದ್ದಾರೆ. ಪುನೀತ್ ಸ್ಮರಣಾರ್ಥವಾಗಿ ಅಲ್ಲಿನ ಪಾರ್ಕ್‌ಗೆ ʻಅಪ್ಪು ಪಾರ್ಕ್ʼ ಎಂದು ಹೆಸರಿಡಲಾಗಿದೆ.
ಅಪ್ಪು ಆಸ್ಟ್ರೇಲಿಯಾಗೆ ಹೋದಾಗ ಅಲ್ಲಿನ ಕನ್ನಡಿಗರ ಮೇಲೆ ಅಪಾರ ಪ್ರೀತಿಯನ್ನ ಇಟ್ಟುಕೊಂಡಿದ್ದರು. ಆಸ್ಟ್ರೇಲಿಯಾಗೆ ಬಂದ ಸಂದರ್ಭದಲ್ಲಿ ಅಲ್ಲಿನ ಅಭಿಮಾನಿಗಳನ್ನ ಭೇಟಿಯಾಗುತ್ತಿದ್ದರು. ಇದೀಗ ನಮ್ಮ ನೆಚ್ಚಿನ ನಟನಿಗೆ ವಿಶೇಷವಾಗಿ ಗೌರವ ಸೂಚಿಸಿದ್ದಾರೆ. ಇದನ್ನೂ ಓದಿ:ಹೈವೋಲ್ಟೇಜ್ ಆ್ಯಕ್ಷನ್ ʻಪಠಾಣ್ʼ ಟೀಸರ್‌ನಲ್ಲಿ ಶಾರುಖ್ ಖಾನ್ ಗ್ರ್ಯಾಂಡ್ ಎಂಟ್ರಿ
ಕರ್ನಾಟಕ ಸಂಪ್ರದಾಯದಂತೆ ಆಸ್ಟ್ರೇಲಿಯಾ ದೇಶದಲ್ಲಿ “ಅಪ್ಪು ಪಾರ್ಕ್” ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಉದ್ಘಾಟನೆ!
ಕನ್ನಡ ಮಣ್ಣಿನ ಹೆಮ್ಮೆಯ ಪುತ್ರ#Kannada #Kannadiga #Karnataka pic.twitter.com/eVnehVtGNv
— GC ChandraShekhar (@GCC_MP) November 1, 2022
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಪ್ಪು ಪಾರ್ಕ್ ಉದ್ಘಾಟನೆ ಮಾಡಿದ್ದಾರೆ. ಈ ಕುರಿತು ರಾಜ್ಯ ಸಭಾ ಸಂಸದರಾದ ಜೆ.ಸಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪುಗೆ ಕನ್ನಡ ಮಣ್ಣಿನ ಹೆಮ್ಮೆಯ ಪುತ್ರ ಎಂದು ಬರೆದುಕೊಂಡಿದ್ದಾರೆ.