ಪುನೀತ್ ರಾಜ್ ಕುಮಾರ್ (Puneeth Rajkumar) ನಟಿಸಿ, ನಿರ್ಮಾಣ ಮಾಡಿರುವ ಗಂಧದ ಗುಡಿ (Gandhad Gudi) ಪ್ರಿ ರಿಲೀಸ್ ಇವೆಂಟ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತೀಯ ಸಿನಿಮಾ ರಂಗವೇ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಪುನೀತ್ ಸಹೋದರಿ ಲಕ್ಷ್ಮಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಂದೆಯ ಗಂಧದ ಗುಡಿ ಸಿನಿಮಾ ಮತ್ತು ತಮ್ಮನ ಗಂಧದ ಗುಡಿ ಡಾಕ್ಯುಮೆಂಟರಿ ಬಗ್ಗೆ ಮಾತನಾಡಿದ್ದಾರೆ.
Advertisement
ಅಪ್ಪು ಕನಸಿನ ಚಿತ್ರವಿದು. ಅವನಿಗೆ ಅಪ್ಪಾಜಿ ಗಂಧದಗುಡಿ ತುಂಬಾ ಇಷ್ಟ ಆಗಿತ್ತು. ಎಲ್ಲಾ ಅಭಿಮಾನಿಗಳು ಕಾಯ್ತಿರೋ ಹಾಗೆನಾನು ಗಂಧದ ಗುಡಿಗಾಗಿ ಕಾಯ್ತಿದ್ದೀನಿ. ಗಂಧದಗುಡಿ ರಿಲೀಸ್ ಆಗುವಾಗ ಅಪ್ಪು ಇನ್ನೂ ಹುಟ್ಟಿರಲಿಲ್ಲ. ಆಮೇಲೆ ದೊಡ್ಡವನಾದ ಮೇಲೆ ನೋಡ್ದಾಗ ತುಂಬಾ ಖುಷಿ ಪಡ್ತಿದ್ದ. ಅದೇ ಕನಸು ಈ ಥರ ಕರೆದುಕೊಂಡು ಹೋಗಿರಬೇಕು. ಗಂಧದಗುಡಿ ಶೂಟಿಂಗ್ ಆಗುವಾಗ ನಾನು, ಪೂರ್ಣಿಮಾ, ರಾಘು ಎಲ್ಲರೂ ಹೋಗಿದ್ದೆವು. ಅಪ್ಪು ಗಂಧದಗುಡಿ ಶೂಟಿಂಗ್ ಆಗುವಾಗ ಕಾಡಿಗೆ ಹೋದಾಗ ಹೇಳಿದ್ದ. ನಾನು ಜೋಪಾನ ಇರ್ತೀನಿ ಅಂತ ಅವ್ನೇ ಹೇಳಿದ್ದ. ಅಪ್ಪು ಇಲ್ಲದೆ ಈ ಒಂದು ವರ್ಷ ಹೇಗಿದ್ದೆವೋ ಗೊತ್ತಿಲ್ಲ. ಪ್ರತಿ ದಿನ ಪ್ರತಿ ಕ್ಷಣ ನೆನಪಾಗ್ತಾನೆ. ನಮ್ಮ ಜೊತೆ ಇರುವ ಅಭಿಮಾನಿಗಳಿಗೆ ನಾವು ಚಿರಋಣಿ’ ಎಂದರು ಲಕ್ಷ್ಮಿ (Lakshmi). ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
Advertisement
Advertisement
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ (Puneetha Parva) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.