ಇಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರ 4ನೇ ವರ್ಷದ ಪುಣ್ಯಸ್ಮರಣೆ. 4ನೇ ವರ್ಷದ ಪುಣ್ಯಸ್ಮರಣೆಗೆ ಇಡೀ ಅಪ್ಪು ಅಭಿಮಾನಿ ಬಳಗ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದೆ. ದೊಡ್ಮನೆ ಕುಟುಂಬಸ್ಥರು ಆಗಮಿಸಿ ಪೂಜೆ ನೆರವೇರಿಸಿದ್ದಾರೆ. ಬಳಿಕ ಅಪ್ಪು ನೆನೆದು ಶಿವರಾಜ್ ಕುಮಾರ್ (Shivarjkumar) ಮಾತಾನಾಡಿದ್ದಾರೆ.
ಅಪ್ಪು 100% ತಂದೆಗೆ ತಕ್ಕ ಮಗ. ಅವನು ಇಲ್ಲ ಅಂತ ಅಂದುಕೊಂಡಿದ್ದರೆ ಕಷ್ಟ ಆಗುತ್ತದೆ. ಅವನ ನೆನಪಲ್ಲಿ ಬಾಳಬೇಕು. ನಮ್ಮಲ್ಲಿ ಅವನನ್ನು ತೋರಿಸಲು ಪ್ರಯತ್ನ ಪಡುತ್ತಿದ್ದೇವೆ. ಯಾವಾಗಲೂ ಅವನ ಮೇಲೆ ಪ್ರೀತಿ ಇರುತ್ತದೆ. ಎಲ್ಲರೂ ಅವನನ್ನ ಇಷ್ಟ ಪಡುತ್ತಾರೆ. ನಮಗೆಲ್ಲ ಅಪ್ಪಾಜಿ ಹಾಗೂ ಅಪ್ಪು ಬಗ್ಗೆ ಮಾತನಾಡದೇ ಇರುವ ದಿನವೇ ಇಲ್ಲ. ಅವನು ಎಲ್ಲೂ ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ ಅಂತ ಅನ್ಕೊಂಡು ಮಾತಾಡ್ತೀನಿ ಎಂದು ನುಡಿದಿದ್ದಾರೆ ಶಿವಣ್ಣ. ಇದನ್ನೂ ಓದಿ: ಪುನೀತ್ ಪುಣ್ಯಸ್ಮರಣೆ – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ
ಯಾರಿಗೂ ಗೊತ್ತಾಗದ ಹಾಗೆ ಸಹಾಯ ಮಾಡಬೇಕು. ಇನ್ನು ಒಂದೇ ಸಿನಿಮಾದಲ್ಲಿ ಬ್ರದರ್ಸ್ ಆಗಿ ಸಿನಿಮಾ ಮಾಡುವ ಬಗ್ಗೆ ಆಸೆ ಇತ್ತು. ಆದರೆ ಅದಕ್ಕೆ ಸಮಯ ಕೂಡಿ ಬರಲಿಲ್ಲ ಎಂದರು.
AI ಮೂಲಕ ಶಿವಣ್ಣ ಅಪ್ಪು ಸಿನಿಮಾ ಮಾಡಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್, ಎಐಯಿಂದ ಸಿನಿಮಾ ಮಾಡುವುದಾದರೆ ಅಚ್ಚುಕಟ್ಟಾಗಿ ಬರಬೇಕು. ಅದು ಆರ್ಟಿಫಿಷಿಯಲ್ ಅನ್ನಿಸಬಾರದು. ಹಾಗಿದ್ದಾಗ ಸಿನಿಮಾ ಮಾಡಬಹುದು ಎಂದು ಹೇಳಿದರು.

