ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಅಪ್ಪು ಕಪ್ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) 2 ಸೀಸನ್ ಅದ್ದೂರಿಯಾಗಿ ನಡೆದಿದೆ.
ಕಳೆದ ತಿಂಗಳು `ಅಪ್ಪು ಕಪ್ ಸೀಸನ್ 3′ (Appu Cup Season 3) ಲೀಗ್ ಪಂದ್ಯಗಳು ಆರಂಭವಾಗಿದೆ. ಇತ್ತೀಚೆಗೆ ಈ ಲೀಗ್‌ನ ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ಅಶ್ವಿನಿ ಪುನೀತ್ ರಾಜಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸರವಣ ಚಾಲನೆ ನೀಡಿದ್ದರು. ಇದನ್ನೂ ಓದಿ: ಭೀಮ ಖ್ಯಾತಿಯ ಜಯ ಸೂರ್ಯ ನಟನೆಯ `ದಿ ಟಾಸ್ಕ್’ ಚಿತ್ರೀಕರಣ ಮುಕ್ತಾಯ
ಲೀಗ್‌ನ ಪೂರ್ವಭಾವಿಯಾಗಿ `ಅಪ್ಪು ಸಂಭ್ರಮ’ ಸಮಾರಂಭ ಆಯೋಜಿಸಲಾಗಿದ್ದು, ಆ ಸಮಾರಂಭದಲ್ಲಿ ಜರ್ಸಿ ಅನಾವರಣ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಸರವಣ ಜರ್ಸಿ ಅನಾವರಣ ಮಾಡಿದರು. ಚಿತ್ರರಂಗದ ಅನೇಕ ಗಣ್ಯರು, ಲೀಗ್‌ನಲ್ಲಿ ಭಾಗವಹಿಸುತ್ತಿರುವ ಕಲಾವಿದರು. ತಂಡಗಳ ಮಾಲೀಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ‘ರಾಮಾಚಾರಿ’ಯಲ್ಲಿ ಬಿಗ್ ಟ್ವಿಸ್ಟ್ : ವಿಲನ್ ಗ್ಯಾಂಗ್ ಹಾಕೇ ಬಿಡ್ತು ಚೂರಿ !
ಜರ್ಸಿ ಅನಾವರಣ ಮಾಡಿ ಮಾತನಾಡಿದ ಸರವಣ ಅವರು, ಚೇತನ್ ಸೂರ್ಯ ನೇತೃತ್ವದಲ್ಲಿ ಕಳೆದ 2 ಸೀಸನ್‌ಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಸೀಸನ್ ಸಹ ಅಷ್ಟೇ ಅದ್ದೂರಿಯಾಗಿ ನಡೆಸುತ್ತಾರೆ ಎಂಬ ಭರವಸೆ ಇದೆ. ನಮ್ಮ ಸಾಯಿ ಗೋಲ್ಡ್ ಸಂಸ್ಥೆಯಿಂದ 10 ಲಕ್ಷ ರೂ.ಗಳನ್ನು ಈ ಸೀಸನ್‌ಗೆ ನೀಡುತ್ತಿದ್ದೇನೆ. ಜೊತೆಗೆ ಭಾಗವಹಿಸುವ ಪ್ರತಿಯೊಬ್ಬರಿಗೂ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ ಗಿಫ್ಟ್ ವೋಚರ್ ಸಹ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್ ಜಾಮೀನು ಭವಿಷ್ಯ; ವಾದ-ಪ್ರತಿವಾದ ಮುಕ್ತಾಯ – ಒಂದು ವಾರದಲ್ಲಿ ಸುಪ್ರೀಂ ಆದೇಶ
`ಅಪ್ಪು ಕಪ್’ನ ಆಯೋಜಕ ಚೇತನ್ ಸೂರ್ಯ ಮಾತನಾಡಿ, ಅಪ್ಪು ಕಪ್ ಸೀಸನ್ 3 ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಇಂದು ಸರವಣ ಅವರಿಂದ ಜರ್ಸಿ ಅನಾವರಣವಾಗಿದೆ. 10 ಕೆಜಿ ತೂಕವಿರುವ ಅಪ್ಪು ಅವರ ಪ್ರತಿಮೆಯ ಈ ಬೆಳ್ಳಿ ಕಪ್ ಸತತ 3 ಸೀಸನ್‌ಗಳನ್ನು ಗೆದ್ದ ತಂಡದ ಪಾಲಾಗುತ್ತದೆ. ಈ ಬಾರಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಲೀಗ್ ಪಂದ್ಯಗಳು ಆರಂಭವಾಗಲಿದೆ. ಫೈನಲ್ ಪಂದ್ಯ ಗೋವಾದಲ್ಲಿ ನಡೆಯಲಿದೆ. `ಅಪ್ಪು ಕಪ್’ ಯಶಸ್ವಿಯಾಗಲು ಸಹಕಾರ ನೀಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್, ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ ಅವರು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.