ಕರುನಾಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 10,11ರಂದು ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್ ಫುಲ್ ನಿಂದ ಕರುನಾಡ ಸಂಭ್ರಮ ಕೂಡಿರಲಿದೆ.
Advertisement
ವಿದ್ಯಾಪೀಠ ಸರ್ಕಲ್ ಡೊಂಕಲ ಗ್ರೌಂಡ್ ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ವರುಣ್ ಸ್ಟುಡಿಯೋಸ್, ರಾಜ್ ಇವೆಂಟ್ಸ್ ಜೊತೆಗೂಡಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಚಿರಂಜೀವಿ ಸರ್ಜಾ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
Advertisement
ಕರುನಾಡ ಸಂಭ್ರಮ ಅಂದ್ರೇನೆ ಕಲರ್ ಫುಲ್ ಕಾರ್ಯಕ್ರಮ, ಚಂದನವನದ ತಾರೆಗಳ ಸಮಾಗಮ, ಸ್ಟಾರ್ ಗಾಯಕರ ಹಾಡು, ನಟ, ನಟಿಯರ ಡಾನ್ಸ್. ಈ ಬಾರಿಯೂ ಈ ಸಂಭ್ರಮ ಇನ್ನಷ್ಟು ರಂಗಿನಿಂದ ಕೂಡಿರಲಿದೆ. ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ, ಧ್ರುವ ಸರ್ಜಾ, ರವಿಶಂಕರ್ ಗೌಡ, ನಿಧಿ ಸುಬ್ಬಯ್ಯ, ಆರ್ಮುಗಂ ರವಿ ಶಂಕರ್, ಮಾನ್ವಿತಾ ಹರೀಶ್, ಸಂಗೀತ ಶೃಂಗೇರಿ, ವಿರಾಟ್, ಕಾವ್ಯ ಶಾ, ವಿಕ್ರಂ ರವಿಚಂದ್ರನ್ ಸೇರಿದಂತೆ ಹಲವು ತಾರೆಯರು ಕರುನಾಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ
Advertisement
ಎಸ್ ಪಿ ಬಿ ಚರಣ್, ಸಿಂಗರ್ ಮನು, ನವೀನ್ ಸಜ್ಜು, ಅನನ್ಯ ಭಟ್, ಅನುರಾಧ ಭಟ್, ವಿಜಯ್ ಪ್ರಕಾಶ್ ಒಳಗೊಂಡ ಖ್ಯಾತ ಗಾಯಕರು ಈ ಸಂಭ್ರಮದ ರಂಗನ್ನು ತಮ್ಮ ಹಾಡಿನ ಮೂಲಕ ಹೆಚ್ಚಿಸಲಿದ್ದಾರೆ.