ತಮ್ಮ ನೆಚ್ಚಿನ ನಟರನ್ನ ಭೇಟಿ ಆಗುವುದು ಅವರಿಗೆ ತಮ್ಮ ಕೈಲಾದ ಉಡುಗೊರೆ ಕೊಡುವುದು ಇದೇನು ಹೊಸತಲ್ಲ. ಆದರೆ ಇಲ್ಲೊಬ್ಬ ವಿಶೇಷಚೇತನ ಅಭಿಮಾನಿ ಅಂದರೆ ಮಾತು ಬಾರದ ಕಿಚ್ಚನ ಅಭಿಮಾನಿ ಸುದೀಪ್ (Kiccha Sudeep) ಭೇಟಿ ಮಾಡಿದ್ದಾನೆ. ಕಿಚ್ಚ ಸುದೀಪ್ ಕೂಡಾ ಅಭಿಮಾನಿಯನ್ನ (Fans) ಭೇಟಿ ಮಾಡಿದ್ದಾರೆ. ಕಿಚ್ಚನಿಗೆ ಏನು ಹೇಳಬೇಕು ಅದನ್ನ ಬರವಣಿಗೆಯಲ್ಲಿ ಬರೆದು ತಂದಿದ್ದಾನೆ. ಅಭಿಮಾನಿ ಬರೆದುಕೊಂಡು ಬಂದಿದ್ದ ಪತ್ರವನ್ನ ಸುದೀಪ್ ತಾಳ್ಮೆಯಿಂದ ಪೂರ್ತಿಯಾಗಿ ಓದಿದ್ದಾರೆ.
ನಂತರ ನನ್ನಿಂದ ಏನಾಗ್ಬೇಕು ಅಂತ ಸುದೀಪ್ ಸನ್ನೆಯಿಂದಲೇ ಕೇಳಿದ್ದಾರೆ. ಅದಕ್ಕೆ ಅಭಿಮಾನಿ ಕೂಡಾ ಪ್ರತಿಕ್ರಿಯಿಸಿದ್ದಾನೆ. ಬಳಿಕ ಸುದೀಪ್ ವಿಶೇಷಚೇತನ ಅಭಿಮಾನಿಗೆ ಸಹಾಯವನ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಊಟ ಆಯ್ತಾ ಅಂತಾ ಸುದೀಪ್ ಸನ್ನೆ ಮೂಲಕ ಕೇಳಿದ್ದಾರೆ ಸುದೀಪ್, ಇಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾನೆ. ಸರಿ ಇಲ್ಲೆ ಊಟ ಮಾಡಿ ಹೋಗಿ ಅಂತಾ ಸುದೀಪ್ ಅಭಿಮಾನಿಗೆ ಊಟ ಮಾಡಿಸಿ ಕಳುಹಿಸಿದ್ದಾರೆ.
ಅಭಿಮಾನಿಗಳು ನೆಚ್ಚಿನ ನಟರನ್ನ ಹುಡುಕಿಕೊಂಡು ಬರ್ತಾರೆ ಅದಕ್ಕೆ ನಟರು ಸಹ ಅವರನ್ನ ಭೇಟಿ ಮಾಡಿ ಪ್ರತಿಕ್ರಿಯೆ ನೀಡುವುದು ವಿಶೇಷ. ಆದರೆ ವಿಶೇಷಗಳಲ್ಲಿ ವಿಶೇಷ ಅಂದರೆ ಈ ಅಭಿಮಾನಿಗೆ ಮಾತು ಬರುವುದಿಲ್ಲ ಆದರೂ ಕಿಚ್ಚ ಸುದೀಪ್ ಭೇಟಿ ಮಾಡಬೇಕು. ತನ್ನ ಮನದಾಳದ ಮಾತನ್ನ ಹಂಚಿಕೊಳ್ಳಬೇಕು ಅಂತ ಬಂದು ಭೇಟಿ ಮಾಡಿದ್ದಾನೆ. ಸುದೀಪ್ ಹಾಗೂ ಅಪ್ಪು ಇರುವ ಫೋಟೋವನ್ನ ಉಡುಗೊರೆಯಾಗಿ (Gift) ನೀಡಿದ್ದಾನೆ.
ಮನೆ ಬಳಿ ಬಂದ ವಿಶೇಷಚೇತನ ಅಭಿಮಾನಿಯನ್ನ ಭೇಟಿ ಮಾಡಿ ಅವರ ಆಸೆಯನ್ನ ಈಡೇರಿಸಿದ್ದಾರೆ ಕಿಚ್ಚ ಸುದೀಪ್. ಈ ಸಂದರ್ಭಕ್ಕೆ ಕಿಚ್ಚನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ `ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿರುವ ಸುದೀಪ್ ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ ಎನ್ನುವ ನಿರೀಕ್ಷಯಲ್ಲಿ ಅಭಿಮಾನಿ ಬಳಗ.