ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ಬಗ್ಗೆ ದೊಡ್ಡ ಚರ್ಚೆ ಆಗುತ್ತಿರುವ ನಡುವೆಯೇ, ಬಿಬಿಎಂಟಿಸಿಯ (BMTC) ಆ ಒಂದು ಎಡವಟ್ಟು ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತಿದೆ. ಇಲಾಖೆಯ ಒಂದು ಪೋಸ್ಟ್ ಗೆ ಇಬ್ಬರನ್ನು ನೇಮಕ ಮಾಡಿದ್ದು, ಇದು ಸದ್ಯ ಅನೇಕ ಅನುಮಾನಗಳಿಗೆ ಕಾರಣವಾಗುತ್ತಿದೆ.
Advertisement
ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವರ್ಗಾವಣೆ ದಂಧೆಯ ಸದ್ದು ಜೋರಾಗಿದೆ. ಹಲವು ಇಲಾಖೆಗಳಲ್ಲಿ ವರ್ಗಾವಣೆ ದಂಧೆ ಜೋರಾಗಿದೆ ಅಂತ ದೊಡ್ಡ ಮಟ್ಟದ ಆರೋಪಗಳು ಕೇಳಿ ಬಂದಿತ್ತು. ಆದರೆ ಈ ಎಲ್ಲಾ ಆರೋಪ ಮತ್ತು ಚರ್ಚೆಗಳ ನಡುವೆ ಬಿಎಂಟಿಸಿಯಲ್ಲಿನ ಒಂದು ವರ್ಗಾವಣೆ ಹಲವು ಅನುಮಾನ ಮತ್ತು ಆರೋಪಗಳಿಗೆ ಪುಷ್ಟಿ ನೀಡಿದೆ.
Advertisement
Advertisement
ಬಿಎಂಟಿಸಿಯ ಘಟಕ ವ್ಯವಸ್ಥಾಪಕರ ವರ್ಗಾವಣೆಯಲ್ಲಿ ಈ ಎಡವಟ್ಟಾಗಿದೆ. ಘಟಕ 27ರ ವ್ಯವಸ್ಥಾಪಕ ನಿರ್ದೇಶಕರ ಜಾಗಕ್ಕೆ ಬಿಎಂಟಿಸಿ ನಿಗಮ ಇಬ್ಬರು ಅಧಿಕಾರಿಗಳನ್ನ ಒಂದೇ ಪೋಸ್ಟ್ ಗೆ ವರ್ಗಾವಣೆ ಮಾಡಿದೆ. ಈ ಹಿಂದೆ ಘಟಕ 52ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೌಧರಿ, ಮತ್ತು ಘಟಕ 32ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್‍ರನ್ನು ಒಂದೇ ಘಟಕದ ವ್ಯವಸ್ಥಾಪಕರ ಜಾಗಕ್ಕೆ ವರ್ಗಾವಣೆ ಮಾಡಿ ಎಡವಟ್ಟು ಮಾಡಿದೆ. ಬುಧವಾರ ಖುದ್ದು ಆದೇಶ ಹೊರಡಿಸಿರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಹಿ ಮಾಡಿ ಹೊರಡಿಸಿರೋ ಆದೇಶದಲ್ಲಿ ಈ ಎಡವಟ್ಟು ಬಹಿರಂಗವಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ
Advertisement
ಈ ಎಡವಟ್ಟು ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ಬಿಎಂಟಿಸಿ ಒಬ್ಬ ಅಧಿಕಾರಿಯನ್ನು ಕೂಡಲೇ ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡಿದೆ. ಘಟಕ 27ಕ್ಕೆ ವರ್ಗಾವಣೆಯಾಗಿದ್ದ 52ರ ಘಟಕದ ಅಧಿಕಾರಿ ಚೌಧರಿಯವರನ್ನ 19ರ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮತ್ತೊಬ್ಬ ಅಧಿಕಾರಿ ರಮೇಶರನ್ನ ಗೊಂದಲವಾಗಿದ್ದ ಘಟಕ 27ರ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಸುವ ಮೂಲಕ ಆದೇಶ ಹೊರಡಿಸಿ ಜಾರಿಕೊಂಡಿದೆ.
ಒಟ್ಟಾರೆ ಬಿಎಂಟಿಸಿ ವರ್ಗಾವಣೆ ಎಡವಟ್ಟಿನ ಬಗ್ಗೆ ನಿಗಮ ಮರು ಆದೇಶ ಹೊರಡಿಸುವ ಮೂಲಕ ತೇಪೆ ಹಚ್ಚುವ ಕೆಲಸವನ್ನಂತು ಮಾಡಿದೆ. ಆದರೆ ಈ ಎಡವಟ್ಟು ಸದ್ಯ ಕೆಲ ಅನುಮಾನಗಳ ಜೊತೆ ಚರ್ಚೆಯನ್ನ ಹುಟ್ಟಹಾಕುತ್ತಿರೋದಂತು ಸುಳ್ಳಲ್ಲ.