`ದಳಪತಿ’ಗಳಿಗೆ ಸೆಡ್ಡು ಹೊಡೆದ ಸಿ.ಎಂ ಇಬ್ರಾಹಿಂ ಬಣ- ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ನೇಮಕ

Public TV
2 Min Read
JDS CM IBRAHIM

ಬೆಂಗಳೂರು: `ದಳಪತಿ’ಗಳಿಗೆ ಸಿ.ಎಂ ಇಬ್ರಾಹಿಂ (CM Ibrahim) ಬಣ ಸೆಡ್ಡು ಹೊಡೆದಿದೆ. ಜೆಡಿಎಸ್ (JDS) ರೆಬೆಲ್ ಟೀಮ್ ರಾಷ್ಟ್ರೀಯ ಅಧ್ಯಕ್ಷರನ್ನೇ ಬದಲಾವಣೆ ಮಾಡಿದೆ.

ಜೆಡಿಎಸ್‍ನಿಂದ ಉಚ್ಛಾಟನೆಗೊಂಡ ಅಸಮಾಧಾನಿತರು ಬೆಂಗಳೂರಿನ ಕೆ.ಜೆ ಹಳ್ಳಿ ಬಳಿ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದರು. ಈ ವೇಳೆ ದೇವೇಗೌಡರನ್ನು ಕೆಳಗಿಳಿಸಿ ಸಿ.ಕೆ.ನಾಣು (C.K Nanu) ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

JDS CM IBRAHIM 2

ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯ ಅಲ್ಲ, ಇದು ರಾಷ್ಟ್ರೀಯ ಕೌನ್ಸಿಲ್ ನ ನಿರ್ಧಾರ. ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಯಿತು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನ ನಾಣುರವರಿಗೆ ನೀಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ ಎಂದರು.

ಅಖಿಲೇಶ್ ಯಾದವ್ (Akhilesh Yadav), ನಿತೀಶ್ ಕುಮಾರ್ (Nitish KUmar) ಕೂಡ ಬರುತ್ತಾರೆ. ಹಲವು ಹಿರಿಯರ ಆದರ್ಶ ನಮ್ಮ ಆದರ್ಶ. ಅದರ್ಶವಾದಿಗಳು ಸತ್ರೂ ಅವರ ಅದರ್ಶ ಶಾಶ್ವತವಾಗಿ ಇರುತ್ತದೆ. ಕೆಲವರು ಬದುಕಿದ್ರೂ, ಅದರ್ಶ ಬಿಟ್ಟು ಸತ್ತಂತೆ ಇರ್ತಾರೆ. 92ನೇ ವಯಸ್ಸಿನಲ್ಲಿ ತಮ್ಮ ಸಿದ್ಧಾಂತ ಬಿಟ್ಟು ಕೊಟ್ರಿ, 5 ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ. ನಾನು ಹುಟ್ಟಿದ್ದು ಸಿದ್ಧಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದ್ರು ನಾ ಹೋಗಲಿಲ್ಲ, ರಾಜ್ಯಪಾಲರು ಆಗಲು ಕರೆದ್ರು ನಾ ಹೋಗಲಿಲ್ಲ ಎಂದರು. ಇದನ್ನೂ ಓದಿ: ಮುಂದಿನ ವರ್ಷದಿಂದ್ಲೇ ಶಾಲಾ ಮಕ್ಕಳಿಗೆ ಉಚಿತ ʻಸೈಕಲ್‌ ಭಾಗ್ಯʼ – ಮಧು ಬಂಗಾರಪ್ಪ ಭರವಸೆ

JDS CM IBRAHIM 1

ದೇವೆಗೌಡ್ರು (HD Devegowda) ಹೇಳಿದ್ರು ಸತ್ತವರ ಫೋಟೋ ಹಾಕಿದ್ದಾರೆ. ಜಯ ಪ್ರಕಾಶ್ ನಾರಾಯಣ್, ಗಾಂಧೀಜಿ, ರಾಮ ಕೃಷ್ಣ ಹೆಗಡೆ ಇವರು ಸತ್ರೂ ಸಿದ್ಧಾಂತಗಳಿಂದ ಜೀವಂತವಾಗಿರುತ್ತಾರೆ. ಅನ್ನೋದನ್ನ ತೋರಿಸ್ತೀವಿ. ಕೆಲವರು ಬದುಕಿದ್ರೂ ಸತ್ತ ಹೆಣಗಳು ಅನ್ನೋದನ್ನ ಹೇಳೊಕೆ ಇಷ್ಟಪಡ್ತೀನಿ. ಮಕ್ಕಳ ಹಿತಕ್ಕಾಗಿ…ಎರಡು ಸೀಟ್ ಗಾಗಿ ಸಿದ್ಧಾಂತ ಬಲಿ ಕೊಟ್ಟಿದ್ದೀರಿ. ನಾವು ಮೂರು ಅವಕಾಶ ಕೊಟ್ವಿ. ಕೊನೆಗೆ ಇವತ್ತು 11 ನೇ ತಾರೀಖು, ಅವರನ್ನ ಅಧ್ಯಕ್ಷಗಿರಿಯಿಂದ ತೆಗೆದು ಸಿಕೆ ನಾಣು ಅವರಿಗೆ ಅಧಿಕಾರ ಕೊಟ್ಟಿದ್ದೀವಿ ಎಂದು ಹೇಳಿದರು.

Share This Article