ನವದೆಹಲಿ: ಭಾರತದಲ್ಲಿ ಮುಂದಿನ ಸಿಡಿಎಸ್ ನೇಮಕದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊನೆಗೂ ಮೌನ ಮುರಿದಿದ್ದಾರೆ. ಶೀಘ್ರವೇ ಸೇನಾ ಪಡೆಗಳ ಮುಖ್ಯಸ್ಥರನ್ನು (CDS) ನೇಮಕ ಮಾಡುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ʼಅಗ್ನಿಪಥ್ʼ ನೇಮಕಾತಿ ಯೋಜನೆ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಸಿಡಿಎಸ್ ನೇಮಕ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುವಕರಿಗೆ ಸೇನೆಯಲ್ಲಿ ಹೊಸ ಅವಕಾಶ – ಅಗ್ನಿಪಥ್ ನೇಮಕಾತಿ ಯೋಜನೆ ಪ್ರಾರಂಭ
2021ರ ಡಿಸೆಂಬರ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ಮೊದಲ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್ ಹುದ್ದೆ ತೆರವಾಗಿದೆ.
ಈಗ ಸರ್ಕಾರವು ಸಶಸ್ತ್ರ ಪಡೆಗಳ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಸೇವೆಯಲ್ಲಿರುವ ಅಥವಾ 62ಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಹಾಗೂ ವೈಸ್–ಅಡ್ಮಿರಲ್ ಸಿಡಿಎಸ್ ಹುದ್ದೆಗೆ ಅರ್ಹರಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ಇದ್ದೂ ಪ್ರವೇಶ ನಿರಾಕರಿಸಿದ ಏರ್‌ಇಂಡಿಯಾಕ್ಕೆ 10 ಲಕ್ಷ ದಂಡ