ಮಂಗಳೂರು: ಕನ್ನಡ ಶಾಲೆಗೆ ಮಲಯಾಳಂ (Malayalam) ಶಿಕ್ಷಕಿಯನ್ನು ನೇಮಿಸಿದ್ದ ಕೇರಳ ಸರ್ಕಾರಕ್ಕೆ ಕೇರಳ ಹೈಕೋರ್ಟ್ (Kerala High Court) ತಪರಾಕಿ ಹಾಕಿದ್ದು, ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಆದೇಶಿಸಿದೆ.
ಕರ್ನಾಟಕದ (Karnataka) ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಕೇರಳ ಸರ್ಕಾರ ಕನ್ನಡ ತಿಳಿಯದ ಮಲಯಾಳಿ ಶಿಕ್ಷಕಿಯನ್ನು ನೇಮಿಸಿತ್ತು. ಇದರಿಂದ ಸಮಸ್ಯೆಗೀಡಾದ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದ್ದು, ಎರಡು ತಿಂಗಳಿನಿಂದ ಕೋರ್ಟ್ ಹೋರಾಟ ನಡೆಸಿದ್ದರು. ಇದನ್ನೂ ಓದಿ: ಧಾರವಾಡ ಮೂಲದ ಆಸ್ಟ್ರೇಲಿಯಾ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಆಸ್ಟ್ರೇಲಿಯಾದ ಕಠಿಣ ಕಾನೂನುಗಳೇ ಸಾವಿಗೆ ಕಾರಣ
ಪೋಷಕರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕೇರಳ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಚಾಟಿ ಬೀಸಿದೆ. ಕನ್ನಡ ಮಕ್ಕಳಿಗೆ ಮಲಯಾಳಿ ಶಿಕ್ಷಕಿಯನ್ನ ನೇಮಿಸಿ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇಂತಹ ಘಟನೆ ಅಡೂರು ಶಾಲೆಯಲ್ಲಿ ಮಾತ್ರವಲ್ಲ ಕಾಸರಗೋಡಿನ ಹೆಚ್ಚಿನ ಕನ್ನಡ ಶಾಲೆಗಳಲ್ಲಿ ಅನ್ಯಾಯ ಆಗುತ್ತಿದೆ ಎಂದು ಪೋಷಕರ ಕಡೆಯ ವಕೀಲರು ವಾದ ಮಾಡಿದ್ದರು.
ಈ ವಾದವನ್ನ ಪುರಸ್ಕರಿಸಿದ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕನ್ನಡಿಗರಿಗೆ ಜಯ ಸಿಕ್ಕಂತಾಗಿದೆ. ಇದನ್ನೂ ಓದಿ: ಚಂದ್ರನ ಮೇಲಿರುವ ಚಂದ್ರಯಾನ-3 ಲ್ಯಾಂಡರ್ ಫೋಟೋ ಸೆರೆ ಹಿಡಿದ ಚಂದ್ರಯಾನ-2ರ ಆರ್ಬಿಟರ್
Web Stories