ಬೆಂಗಳೂರು: ಅಲ್ವಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ನಗರ (Bengaluru City) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಜೀಂ ಪ್ರೇಮ್ ಜೀ (Azim Premji) ಫೌಂಡೇಶನ್ ಆಯ್ಕೆ ಮಾಡಿರುವ ಮದರಾಸಗಳಲ್ಲಿ ಔಪಾಚಾರಿಕ ಶಿಕ್ಷಣ ವಿಷಯಗಳಾದ ಕನ್ನಡ, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಬೋಧಿಸಲು ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ 10 ರಂದು ಸಾಮಾನ್ಯ ಪ್ರವೇಶ ಪರೀಕ್ಷಾ ನಡೆಯಲಿದ್ದು, ಅಕ್ಟೋಬರ್ 13 ರಂದು ಫಲಿತಾಂಶ ಬಿಡುಗಡೆಯಾಗಿ ಅಕ್ಟೋಬರ್ 15 ರಂದು ಬೋಧನಾ ಪ್ರತಾಕ್ಷಿಕೆ ನಡೆಯಲಿದೆ. ಇದನ್ನೂ ಓದಿ: ಮುಂಬೈ ಉಗ್ರರ ವಿರುದ್ಧ ಆಪರೇಷನ್‌ಗೆ ಯುಪಿಎ ಅಡ್ಡಿ – ಚಿದಂಬರಂ ಹೇಳಿಕೆ, ಸೋನಿಯ ವಿರುದ್ಧ ಬಿಜೆಪಿ ಕೆಂಡ
ಅರ್ಹ ಅಭ್ಯರ್ಥಿಗಳು ಅಲ್ಪಸಂಖ್ಯಾತರ ನಿರ್ದೇಶನಾಯಲದ ಅಧಿಕೃತ ಜಾಲತಾಣ www.dom.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದನ್ನೂ ಓದಿ: ಚೆನ್ನೈನಲ್ಲಿ ಕಮಾನು ಕುಸಿದು 9 ಮಂದಿ ಸಾವು – 10ಕ್ಕೂ ಹೆಚ್ಚು ಮಂದಿಗೆ ಗಾಯ
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಪೋಡಿಯೋಂ ಬ್ಲಾಕ್, ವಿ.ವಿ. ಗೋಪುರ, ಡಾ. ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-01 ಅಥವಾ ದೂರವಾಣಿ ಸಂಖ್ಯೆ 080-22866718 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


 
		 
		 
		 
		 
		
 
		 
		 
		 
		