ವಾಷಿಂಗ್ಟನ್: ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ರವಾನೆಯಾಗುವ ಅಶ್ಲೀಲ ಫೋಟೋಗಳನ್ನು ಬ್ಲರ್ ಮಾಡುವಂತಹ ಫೀಚರ್ ಅನ್ನು ಆಪಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೊರ ತಂದಿತ್ತು. ಅಮೆರಿಕದಲ್ಲಿ ಮೊದಲಿಗೆ ಬಿಡುಗಡೆಯಾದ ಫೀಚರ್ ಅನ್ನು ಆಪಲ್ ಶೀಘ್ರವೇ ಜಾಗತಿಕ ಬಳಕೆದಾರರಿಗೂ ಲಭ್ಯವಾಗಿಸಲಿದೆ.
ಈ ಫೀಚರ್ ಮೆಸೇಜಿಂಗ್ ಆಪ್‌ಗಳಲ್ಲಿ ರವಾನೆಯಾಗುವ ಅಶ್ಲೀಲ ಅಥವಾ ಆಘಾತಕಾರಿ ಫೋಟೋಗಳನ್ನು ನೇರವಾಗಿ ತೋರಿಸುವ ಬದಲು ಬ್ಲರ್ ಆಗಿ ತೋರಿಸಲಿದೆ. ಈ ಫೀಚರ್‌ನಲ್ಲಿ ಬ್ಲರ್ ಆಗಿರುವ ಫೊಟೋವನ್ನು ತೆರೆಯುವುದಕ್ಕೂ ಮೊದಲು ಅನುಮತಿ ಕೇಳಲಿದೆ. ಇದನ್ನೂ ಓದಿ: 100 ದಿನಗಳೊಳಗೆ 2 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್
Advertisement
Advertisement
ಇದು ಆಪ್ಟ್-ಇನ್ ಫೀಚರ್ ಆಗಿದ್ದು, ಅಶ್ಲೀಲ ಚಿತ್ರಗಳು ಪರದೆಯಲ್ಲಿ ಗೋಚರಿಸುವುದನ್ನು ತಡೆಯಲು ಬಳಸಬಹುದು. ಈ ಫೀಚರ್ ಮುಖ್ಯವಾಗಿ ಮಕ್ಕಳು ಫೋನ್ ಬಳಸುವಾಗ ಉಪಯುಕ್ತವಾಗಲಿದೆ. ಫೋಷಕರು ತಮ್ಮ ಮಕ್ಕಳ ಕೈಗೆ ಫೋನ್ ಕೊಡುವುದಕ್ಕೂ ಮೊದಲು ಈ ಫೀಚರ್ ಅನ್ನು ಸಕ್ರಿಯಗೊಳಿಸಬಹುದು.
Advertisement
ದಿಸ್ ಫೋಟೋ ಕುಡ್ ಬೀ ಸೆನ್ಸಿಟಿವ್. ಆರ್ ಯು ಶುವರ್ ಯು ವಾಂಟು ವೀವ್(ಈ ಫೋಟೋ ಸೂಕ್ಷ್ಮವಾಗಿರಬಹುದು. ಆದರೂ ಇದನ್ನು ನೀವು ನೋಡಲು ಬಯಸುತ್ತೀರಾ) ಎಂಬ ಎಚ್ಚರಿಕೆಯನ್ನು ಫೀಚರ್ ನೀಡಲಿದೆ. ಈ ಸಂದೇಶವನ್ನು ಅನುಸರಿಸಿ ಆಪಲ್ ಅಶ್ಲೀಲ ಫೋಟೋ ಅರ್ಥವನ್ನು ಹಾಗೂ ಅದನ್ನು ಮಕ್ಕಳು ನೋಡುವುದು ಏಕೆ ಸೂಕ್ತವಲ್ಲ ಎಂಬುದನ್ನು ವಿವರಿಸಿದೆ. ಜೊತೆಗೆ ನಾಟ್ ನೌವ್(ಈಗ ಬೇಡ) ಐ ಆಮ್ ಶುವರ್(ಖಂಡಿತಾ ಬೇಕು) ಆಯ್ಕೆಯನ್ನು ನೀಡುತ್ತದೆ. ಇದನ್ನೂ ಓದಿ: ಹಿಜಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ಖಾಸಗಿ ಕಾಲೇಜಿನ ಶಿಕ್ಷಕಿ
Advertisement
ಆಪಲ್ ಇದೊಂದು ಕೇವಲ ಎಚ್ಚರಿಕಾ ಸಂದೇಶವಾಗಿ ಫೀಚರ್ ಅನ್ನು ತಂದಿದೆ. ಮಕ್ಕಳು ಐ ಆಮ್ ಶುವರ್ ಆಪ್ಶನ್ ಆಯ್ಕೆ ಮಾಡುವ ಮೂಲಕ ಫೊಟೋ ವೀಕ್ಷಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಪೋಷಕರು ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದರ ಬಗ್ಗೆ ಆದಷ್ಟು ಗಮನಹರಿಸುವುದು ಅಗತ್ಯ.
ಆಪಲ್‌ನ ಈ ಫೀಚರ್ ಸದ್ಯ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಲಭ್ಯವಿದೆ. ಶೀಘ್ರವೇ ಎಲ್ಲಾ ದೇಶಗಳಲ್ಲೂ ಈ ಫೀಚರ್ ಲಭ್ಯವಾಗಲಿದೆ ಎಂದು ಆಪಲ್ ತಿಳಿಸಿದೆ.