ನವದೆಹಲಿ: ಭಾರತದಲ್ಲಿ ಆಪಲ್ ಉತ್ಪನ್ನಗಳು (Apple Products) ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಆಪಲ್ ಕಂಪನಿ ಬೆಂಗಳೂರಿನಲ್ಲಿ (Bengaluru) ರಿಟೇಲ್ ಸ್ಟೋರ್ (Retail Stores) ತೆರೆಯಲು ಮುಂದಾಗಿದೆ.
ಬೆಂಗಳೂರು ಮತ್ತು ಪುಣೆಯಲ್ಲಿ ರಿಟೇಲ್ ಸ್ಟೋರ್ ತೆರೆಯಲಾಗುವುದು ಎಂದು ಆಪಲ್ ಘೋಷಿಸಿದೆ. ಏಪ್ರಿಲ್ 2023 ರಲ್ಲಿ ಆಪಲ್ ಕಂಪನಿ ಮುಂಬೈ ಮತ್ತು ದೆಹಲಿಯಲ್ಲಿ ರಿಟೇಲ್ ಸ್ಟೋರ್ ತೆರೆದಿತ್ತು. ಆಪಲ್ ಆಯ್ದ ದೇಶಗಳಲ್ಲಿ ಮಾತ್ರ ರಿಟೇಲ್ ಸ್ಟೋರ್ ತೆರೆಯುತ್ತದೆ. ಇದನ್ನೂ ಓದಿ: ಜರ್ಮನಿಯಲ್ಲಿ ಒನ್‌ಪ್ಲಸ್ ಫೋನ್ ಮಾರಾಟ ನಿಷೇಧ
Advertisement
Advertisement
ವಿಶ್ವಾದ್ಯಂತ 272 ರಿಟೇಲ್ ಸ್ಟೋರ್‌ಗಳನ್ನು ಆಪಲ್ ತೆರೆದಿದೆ. ಅಮೆರಿಕ 272, ಚೀನಾ 45, ಯುನೈಟೆಡ್ ಕಿಂಗ್‌ಡಮ್ 39, ಕೆನಡಾ 28, ಆಸ್ಟ್ರೇಲಿಯಾ 22, ಫ್ರಾನ್ಸ್‌ನಲ್ಲಿ 20 ರಿಟೇಲ್ ಸ್ಟೋರ್‌ಗಳನ್ನು ಆಪಲ್ ತೆರೆದಿದೆ. ಆಪಲ್ ಐಫೋನ್‌ಗಳು (iPhone) ಈಗ ಭಾರತದಲ್ಲೇ ತಯಾರಾಗುತ್ತಿದೆ. ಅಷ್ಟೇ ಅಲ್ಲದೇ ವಿದೇಶಗಳಿಗೆ ರಫ್ತು ಸಹ ಮಾಡಲಾಗುತ್ತಿದೆ. ಇದನ್ನೂ ಓದಿ: Apple iPhone 16 Series ಭಾರತದಲ್ಲಿ ಎಷ್ಟು ದರ? ಬೇರೆ ದೇಶಗಳಲ್ಲಿ ಎಷ್ಟು?
Advertisement
ಜಾಗತಿಕವಾಗಿ ಮಾರಾಟವಾಗುವ ಐಫೋನ್‌ಗಳ ಪೈಕಿ 70% ಐಫೋನ್‌ಗಳನ್ನು ತೈವಾನ್‌ನಲ್ಲಿರುವ ಫಾಕ್ಸ್‌ಕಾನ್ ಕಂಪನಿ ಉತ್ಪಾದಿಸುತ್ತದೆ. ಈ ಕಂಪನಿ ಭಾರತ ಅಲ್ಲದೇ ಚೀನಾ, ಇಂಡೋನೇಷ್ಯಾ ಸೇರಿದಂತೆ ಹಲವು ಕಡೆ ತನ್ನ ಘಟಕವನ್ನು ತೆರೆದಿದೆ. ಸದ್ಯ ಒಟ್ಟು ಐಫೋನ್ ಉತ್ಪಾದನೆಯಲ್ಲಿ 14% ಫೋನ್‌ಗಳು ಭಾರತದಲ್ಲಿ ತಯಾರಾಗುತ್ತಿದೆ. ಮುಂದಿನ 3-4 ವರ್ಷಗಳಲ್ಲಿ ವಿಶ್ವದಲ್ಲಿ ಮಾರಾಟವಾಗುವ ಐಫೋನ್‌ಗಳ ಪೈಕಿ 25% ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುವ ಗುರಿಯನ್ನು ಐಫೋನ್ ಹಾಕಿಕೊಂಡಿದೆ.
Advertisement
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೆಲ ವರ್ಷಗಳ ಹಿಂದೆ ಐಫೋನ್ ಟಾಪ್ 10ನಲ್ಲಿ ಸಹ ಸ್ಥಾನ ಪಡೆಯುತ್ತಿರಲಿಲ್ಲ. ಆದರೆ ಈಗ ಅತಿ ಹೆಚ್ಚು ಮಾರಾಟ ಮಾಡಿದ ಕಂಪನಿಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ.