ಬೆಂಗಳೂರು: ಆಪಲ್ ಕಂಪೆನಿಯ ಐಫೋನ್ ಉತ್ಪಾದನಾ ಘಟಕ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವೇ ತಿಂಗಳಿನಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ ಘಟಕ ಸ್ಥಾಪನೆ ನಡೆಸುವಂತೆ ರಾಜ್ಯ ಸರ್ಕಾರ ಐಫೋನ್ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡದ ಜೊತೆ ಮಾತುಕತೆ ನಡೆಸಿತ್ತು. ಈ ಮಾತುಕತೆ ಫಲ ಕೊಟ್ಟಿದ್ದು ಪೀಣ್ಯದಲ್ಲಿ ಘಟಕ ಸ್ಥಾಪಿಸಲು ಆಪಲ್ ಒಪ್ಪಿಗೆ ನೀಡಿದೆ.
ಭಾರತಕ್ಕೆ ಅವಶ್ಯ ಇರುವಷ್ಟು ಐ ಫೋನ್ ಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಆಪಲ್ ಮುಂದಾಗಿದೆ. ಆದರೆ ಯಾವಾಗ ಈ ಘಟಕ ಆರಂಭವಾಗಲಿದೆ ಎನ್ನುವ ಮಾಹಿತಿ ಸ್ಟಷ್ಟವಾಗಿ ಸಿಕ್ಕಿಲ್ಲ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜೂನ್ ತಿಂಗಳಿನಲ್ಲಿ ಘಟಕ ಆರಂಭವಾಗುವ ಸಾಧ್ಯತೆಯಿದೆ.
Advertisement
ಆಪಲ್ ಪ್ರಸ್ತುತ ಈಗ ಐಫೋನ್‍ಗಳನ್ನು ತೈವಾನ್ ಮೂಲದ ಫಾಕ್ಸ್ ಕನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಈ ಎರಡೂ ಕಂಪೆನಿಗಳ ಘಟಕಗಳು ಚೀನಾದಲ್ಲಿದ್ದು ಇಲ್ಲಿ ಎಲ್ಲ ಭಾಗಗಳನ್ನು ಜೋಡಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.
Advertisement
ಐಫೋನ್ ಒಂದೊಂದು ಭಾಗಗಳನ್ನು ಒಂದೊಂದು ಕಂಪೆನಿ ತಯಾರಿಸುತ್ತದೆ. 3ಜಿ, 4ಜಿ, ಎಲ್‍ಟಿಇ ನೆಟ್‍ವರ್ಕ್ ಚಿಪ್ ಕ್ವಾಲಕಂ ಕಂಪೆನಿ ತಯಾರಿಸಿದರೆ ಎ ಸಿರೀಸ್ ಪ್ರೊಸೆಸರ್ ಸ್ಯಾಮ್ ಸಂಗ್ ತಯಾರಿಸುತ್ತದೆ. ಬ್ಯಾಟರಿ ಸನ್‍ವೊಡಾ/ ಸ್ಯಾಮ್ ಸಂಗ್ ಕಂಪೆನಿ ತಯಾರಿಸಿದರೆ,ಗ್ಲಾಸ್ ಸ್ಕ್ರೀನ್ ಮತ್ತೊದು ಕಂಪನಿ ತಯಾರಿಸುತ್ತದೆ. ಈ ಎಲ್ಲ ಕಂಪೆನಿಗಳ ಭಾಗಗಳು ಅಂತಿಮವಾಗಿ ಫಾಕ್ಸ್ ಕನ್ ಫ್ಯಾಕ್ಟರಿಯಲ್ಲಿ ಜೋಡನೆಯಾಗಿ ಮಾರುಕಟ್ಟೆಗೆ ಬರುತ್ತದೆ.
Advertisement
Apple's intentions to make iPhones in Bengaluru will foster cutting-edge technology ecosystem & supply chain development in the state.
— Priyank Kharge (@PriyankKharge) February 2, 2017