ವಾಷಿಂಗ್ಟನ್: ಆಪಲ್ (Apple) ತನ್ನ ಆಪ್ ಸ್ಟೋರ್‌ನಿಂದ (App Store) ಟ್ವಿಟ್ಟರ್ (Twitter) ಅನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದೆ. ಆದರೆ ನಿರ್ಬಂಧ ಹೇರಲು ಕಾರಣವೇನು ಎಂಬುದನ್ನೇ ತಿಳಿಸಿಲ್ಲ ಎಂದು ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ (Elon Musk) ಆರೋಪಿಸಿದ್ದಾರೆ.
Apple has also threatened to withhold Twitter from its App Store, but won’t tell us why
— Elon Musk (@elonmusk) November 28, 2022
Advertisement
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಸ್ಕ್, ಆಪಲ್ ಕಂಪನಿ ಈಗಾಗಲೇ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಮ್ಮ ಜಾಹೀರಾತು ನೀಡುವುದನ್ನು ನಿಲ್ಲಿಸಿದೆ. ಇದೀಗ ಆಪ್ ಸ್ಟೋರ್‌ನಿಂದ ಟ್ವಿಟ್ಟರ್ ಅನ್ನು ತೆಗೆದುಹಾಕುವುದಾಗಿ ಬೆದರಿಕೆ ಒಡ್ಡಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಮಸ್ಕ್ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಮಾಡಲು ಮುಂದಾಗಿರುವ ಹೊಸ ಬದಲಾವಣೆಗಳ ಕುರಿತು ತಿಳಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರಿಗೆ ವಾಕ್ ಸ್ವಾತಂತ್ರ್ಯವನ್ನು ಹೆಚ್ಚಿಸಲು ಅನುವುಮಾಡಿಕೊಡುವ ಭರವಸೆ ನೀಡಿದ್ದಾರೆ. ಇದು ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಜನರು ನೈಜ ವಿಷಯಗಳನ್ನು ತಿಳಿಬೇಕು ಎಂಬುದೇ ಇದರ ಉದ್ದೇಶ ಎಂದಿದ್ದಾರೆ. ಇದನ್ನೂ ಓದಿ: 50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!
Advertisement
The Twitter Files on free speech suppression soon to be published on Twitter itself. The public deserves to know what really happened …
— Elon Musk (@elonmusk) November 28, 2022
ಮಸ್ಕ್ ಇದೀಗ ಆಪಲ್ ಬೆದರಿಕೆಯ ಬಗ್ಗೆ ತಿಳಿಸಿದ್ದು, ಅವರು ಟ್ವಿಟ್ಟರ್ ಆಪ್‌ನ ಮಾಡರೇಶನ್ ಬೇಡಿಕೆಗಳಿಂದಾಗಿ ಟ್ವಿಟ್ಟರ್ ಮೇಲೆ ಒತ್ತಡ ಹೇರುತ್ತಿದೆ. ಆಪಲ್ ತನ್ನ ಗ್ರಾಹಕರ ಮೇಲೆ ಪರಿಣಾಮ ಬೀರುವ ಎಲ್ಲಾ ಸೆನ್ಸಾರ್‌ಶಿಪ್ ಕ್ರಮಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಪಲ್ ಈ ಹಿಂದೆಯೂ ಗ್ಯಾಬ್ ಹಾಗೂ ಪಾರ್ಲರ್‌ನಂತಹ ಅಪ್ಲಿಕೇಶನ್‌ಗಳನ್ನು ಯಾವುದೇ ದೃಢೀಕರಣ ನೀಡದೇ ತೆಗೆದುಹಾಕಿತ್ತು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಫುಟ್‍ಬಾಲ್ ಫಿವರ್ – ಫಿಫಾ ಮಾದರಿ ಆ್ಯಂಥಮ್ ಸಾಂಗ್ ಮಾಡಿದ ವಿದ್ಯಾರ್ಥಿಗಳು