ನವದೆಹಲಿ: ಆ್ಯಪಲ್ ಕಂಪನಿಯು (Apple Company) ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ತನ್ನ ಕಂಪನಿಯ ಕಾರ್ಪೊರೇಟ್ ವಿಭಾಗದ ಉದ್ಯೋಗಿಗಳ ಬೋನಸ್‌ಗಳನ್ನು (Bonus) ವಿಳಂಬಗೊಳಿಸಲು ನಿರ್ಧರಿಸಿದೆ ಹಾಗೂ ಹಲವು ಉದ್ಯೋಗಿಗಳ ಬೋನಸ್ ಕೂಡಾ ಕಡಿಮೆಗೊಳಿಸುತ್ತದೆ ಎಂದು ವರದಿಗಳು ತಿಳಿಸಿವೆ.
ಈ ವರದಿಗಳು ನಿಜವಾದಲ್ಲಿ ಉದ್ಯೋಗಿಗಳ ಒಂದು ವರ್ಗಕ್ಕೆ ಮುಂದಿನ ತಿಂಗಳು ಬಡ್ತಿ (Promtion) ದೊರೆಯುವುದಿಲ್ಲ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ವರ್ಷಕ್ಕೆ ಎರಡು ಬಾರಿ (ಎಪ್ರಿಲ್ ಮತ್ತು ಅಕ್ಟೋಬರ್) ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತದೆ. ಬಡ್ತಿ ಹಾಗು ಬೋನಸ್ ಹೊರತಾಗಿ ಆ್ಯಪಲ್ ಕಂಪನಿಯು ನೇಮಕಾತಿಯನ್ನು (Recruitment) ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು 2020ರಲ್ಲಿ ಗೂಗಲ್, ಮೆಟಾ ಹಾಗು ಇನ್ನಿತರೆ ಟೆಕ್ ಕಂಪನಿಗಳು ಲೆಕ್ಕಕ್ಕಿಂತ ಜಾಸ್ತಿ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಂಡು ಪ್ರಸ್ತುತ ಸಾವಿರಾರು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿದೆ. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ
Advertisement
Advertisement
ಆ್ಯಪಲ್ ಕಂಪನಿಯ ಹೆಚ್‌ಆರ್ ತಂಡವು ಉದ್ಯೋಗಿಗಳ ಹಾಜರಾತಿಯನ್ನು ಸೂಕ್ಷ್ಮರೀತಿಯಲ್ಲಿ ಗಮನಿಸುತ್ತಿದೆ. ಈ ಕಂಪನಿಯು ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸಿ ಉದ್ಯೋಗಿಗಳು ವಾರಕ್ಕೆ ಮೂರು ಸಲ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಿದೆ. ಇದನ್ನೂ ಓದಿ: ಕೋವಿಡ್ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಭಾರೀ ಇಳಿಕೆ
Advertisement
ಕಂಪನಿಯು ಕಳೆದ ಎರಡು ವರ್ಷಗಳಿಂದ ಇತರೆ ಕಂಪನಿಗಳ ತರಹ ಅಧಿಕ ನೇಮಕಾತಿಯನ್ನು ಮಾಡಿಕೊಳ್ಳದೆ ಎಚ್ಚರಿಕೆಯಿಂದ ನೇಮಕ ಮಾಡಿಕೊಳ್ಳುವ ಮೂಲಕ ಸಾಮೂಹಿಕ ವಜಾಗೊಳಿಸುವಿಕೆಯನ್ನು (Mass Layoff) ತಪ್ಪಿಸಿದೆ. ಈ ಕಂಪನಿಯು 2020 ಮತ್ತು 2021ರ ನಡುವೆ ಕೇವಲ 7,000 ಸಾವಿರ ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿದೆ. ವರದಿಗಳ ಪ್ರಕಾರ ಅದೇ ಕಂಪನಿಯು 2022ನೇ ವರ್ಷದ ಸೆಪ್ಟೆಂಬರ್ ತಿಂಗಳ ಒಳಗಾಗಿ 1,64,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದು 2021ನೇ ವರ್ಷದ ನೇಮಕಾತಿಯಿಂದ ಶೇ.6.5ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ
Advertisement
ಆ್ಯಪಲ್ ಕಂಪನಿಯ ಷೇರುದಾರರ ಸಭೆಯ ಸಂದರ್ಭದಲ್ಲಿ ಕಂಪನಿಯ ಕಾರ್ಯ ನಿರ್ವಾಹಕ (CEO) ಟಿಮ್ ಕುಕ್ (Tim Cook) ಅವರು, ಹಣದ ವಿಷಯದಲ್ಲಿ ಕಂಪನಿಯು ವಿಶೇಷವಾದ ಜಾಗರೂಕತೆಯನ್ನು ಮುಂದುವರೆಸಿದೆ. ನಾವು ಹಣಖರ್ಚು ವಿಷಯದಲ್ಲಿ ಬಹಳ ವಿವೇಕವಾಗಿ ಹಾಗೂ ಚಿಂತನಾಶೀಲರಾಗಿದ್ದೇವೆ ಮತ್ತು ನೇಮಕಾತಿ ಮಾಡಿಕೊಳ್ಳುವುದರಲ್ಲಿ ಉದ್ದೇಶಪೂರ್ವಕವಾಗಿ ಮುಂದುವರೆಯುತ್ತೇವೆ ಎಂದು ಷೇರುದಾರರಿಗೆ ಮಾಹಿತಿಯನ್ನು ತಿಳಿಸಿದರು. ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ