ನವದೆಹಲಿ: ಆಪಲ್ ಭಾರತದಲ್ಲಿ ಆ್ಯಪ್ ಖರೀದಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯನ್ನು ಸ್ಥಗಿತಗೊಳಿಸಿದೆ.
ಆಪಲ್ ತನ್ನ ಚಂದಾದಾರರಿಗೆ ಆ್ಯಪ್ ಖರೀದಿಸಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಆಯ್ಕೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಬಳಕೆದಾರರು ತಮ್ಮ ಆಪಲ್ ಫಂಡ್‌ಗೆ ಹಣವನ್ನು ಸೇರಿಸುವ ಮೂಲಕ ಆ್ಯಪ್ ಖರೀದಿ ಸಾಧ್ಯವಾಗುತ್ತಿದೆ. ಆಪಲ್ ಫಂಡ್ ಪ್ರೀ ಪೇಯ್ಡ್ ಕಾರ್ಡ್ನಂತೆ ಉಪಯೋಗವಾಗಿದ್ದು, ಪ್ರತಿ ತಿಂಗಳು ಬಳಕೆದಾರರ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದನ್ನೂ ಓದಿ: ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್‌ನಲ್ಲಿ ಶುಲ್ಕ ಸಾಧ್ಯತೆ: ಮಸ್ಕ್
Advertisement
Advertisement
ಐಫೋನ್ ಹಾಗೂ ಐಪ್ಯಾಡ್ ಬಳಕೆದಾರರಿಗೆ ಆಪಲ್ ಫಂಡ್ ಬಳಸಲು ಆಪಲ್ ಐಡಿ ರಚಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ. ಬಳಕೆದಾರರು ಆ್ಯಪ್‌ಗಳನ್ನು ನವೀಕರಿಸಲು ಅಥವಾ ಖರೀದಿಸಲು ಬಯಸಿದರೆ, ಆಪಲ್ ಐಡಿ ಮೂಲಕ ವ್ಯವಹಾರ ನಡೆಯಲಿದೆ. ಇದನ್ನೂ ಓದಿ: ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ
Advertisement
Advertisement
ಈ ಹಿಂದೆ ಆಪಲ್ ಡೆಬಿಟ್, ಕ್ರೆಡಿಟ್ ಹಾಗೂ ಯುಪಿಐ ಮೂಲಕ ಪಾವತಿಗೆ ಅವಕಾಶ ನೀಡಿತ್ತು. ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜಾರಿಗೊಳಿಸಿದ ಸ್ವಯಂ-ಡೆಬಿಟ್(ಆಟೋ-ಡೆಬಿಟ್) ನಿಯಮದ ಪರಿಣಾಮವಾಗಿ ಭಾರತೀಯ ಬಳಕೆದಾರರಿಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಯ ಆಯ್ಕೆಯನ್ನು ತೆಗೆದುಹಾಕಲು ಆಪಲ್ ನಿರ್ಧರಿಸಿತು.