ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಐ-ಫೋನ್ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಸಂಬಂಧ ಕಂಪನಿ ಸಹ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಸೇರಿದಂತೆ ಹಲವು ಮಾರುಕಟ್ಟೆ ತಂತ್ರಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ಐ-ಫೋನ್ ಚೀನಾದಲ್ಲಿ ತನ್ನ ಉತ್ಪನ್ನ ಖರೀದಿದಾರರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ.
ಚೀನಾದ ಅಲಿಬಾಬಾ ಗ್ರೂಪ್ ಮಾಲೀಕತ್ವದ ಏಂಟ್ ಫೈನಾನಿಶಿಯಲ್ ಸರ್ವಿಸ್ ಸಹಯೋಗದಿಂದ ಸಾವಿರಾರು ಸರ್ವಿಸ್ ಸೆಂಟರ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಈ ಸಾಲದಿಂದ ಐ-ಫೋನ್ ಖರೀದಿಯಲ್ಲಿ ತಿಂಗಳ ಕಂತು ಕಡಿಮೆಯಾಗಲಿದೆ. ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿರುವ ಚೀನಾದಲ್ಲಿ ಒಂದು ತಿಂಗಳಿನಿಂದ ಐ-ಫೋನ್ ಮಾರುಕಟ್ಟೆ ಕುಸಿತ ಕಾಣಲಾರಂಭಿಸಿತು. ಈ ಹೊಸ ಸ್ಕೀಮ್ ನಿಂದಾಗಿ ಐ-ಫೋನ್ ಚೇತರಿಸಿಕೊಳ್ಳುತ್ತಿದೆ.
Advertisement
Advertisement
ಐ-ಫೋನ್ ಗಾಗಿ ಬಡ್ಡಿ ರಹಿತ ಸಾಲ ಪಡೆಯಲು ಇಚ್ಛಿಸುವ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸಕೊಳ್ಳಬೇಕೆಂದು ಚೀನಾದ ಮೂರು ದೊಡ್ಡ ಬ್ಯಾಂಕ್ ಗಳು ತಿಳಿಸಿವೆ. 12 ರಿಂದ 24 ಕಂತುಗಳಲ್ಲಿ ಗ್ರಾಹಕರು ಹಣವನ್ನು ಪಾವತಿಸಬೇಕಾಗುತ್ತದೆ.
Advertisement
24 ತಿಂಗಳು ಕಂತಿನ ಸೌಲಭ್ಯ ಮಾರ್ಚ್ ತಿಂಗಳಿಗೆ ಅಂತ್ಯವಾಗಲಿದೆ. ಇನ್ನು ಐ-ಫೋನ್ ಬಳಕೆ ಮಾಡುತ್ತಿರುವ ಬಳಕೆದಾರರು ತಮ್ಮ ಹಳೆ ಫೋನ್ ಬದಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹಳೆ ಫೋನ್ ಗಳನ್ನು ಬದಲಿಸಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯ್ತಿಯನ್ನು ಆ್ಯಪಲ್ ಕಂಪನಿ ನೀಡಲು ಮುಂದಾಗಿದೆ. ಈ ವಿಶೇಷ ಆಫರ್ ನಿಂದ 2018ರ ಡಿಸೆಂಬರ್ ನಲ್ಲಾದ ನಷ್ಟ ಸರಿದೂಗಿಸಿಕೊಳ್ಳಲು ಕಂಪನಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv