ವಾಷಿಂಗ್ಟನ್: ಐಓಎಸ್ ಅಪ್‍ಡೇಟ್ ವೇಳೆ ಆ್ಯಪಲ್ ಕಂಪೆನಿಯ ಐಫೋನ್-ಎಕ್ಸ್ ಮಾದರಿಯ ಸ್ಮಾರ್ಟ್ ಫೋನ್ ಏಕಾಏಕಿ ಸ್ಫೋಟಗೊಂಡ ಘಟನೆ ಅಮೆರಿಕದ ಫೆಡರಲ್ ಪ್ರದೇಶದಲ್ಲಿ ನಡೆದಿದೆ.
ಹೌದು, ವಿಶ್ವದಲ್ಲೇ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಹೆಸರುಗಳಿಸಿರುವ ಆ್ಯಪಲ್ 2017 ರಲ್ಲಿ ಬಿಡುಗಡೆ ಮಾಡಿದ್ದ ಐಫೋನ್-ಎಕ್ಸ್ ಆವೃತ್ತಿಯನ್ನು ಐಓಎಸ್ 12 ಗೆ ಅಪ್‍ಡೇಟ್ ಮಾಡುವ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಐಫೋನ್ ಎಕ್ಸ್ ಮೊಬೈಲ್ ಸಂಪೂರ್ಣ ಹಾಳಾಗಿ ಹೋಗಿದೆ.
https://twitter.com/rocky_mohamad/status/1062554244241190913
ಐಫೋನ್ ಸ್ಪೋಟಗೊಂಡಿರುವ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮೊಬೈಲ್ ಮಾಲೀಕ ರಾಕಿ ಮೊಹಮ್ಮದ್ ಅಲಿ, ಓಎಸ್ ಅಪ್‍ಡೇಟ್ ಮಾಡುವಾಗ ಆ್ಯಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ. ನನಗೆ ಇಲ್ಲಿ ಏನಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲವೆಂದು ಆ್ಯಪಲ್ ಕಂಪನಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
ಐಫೋನ್ ಎಕ್ಸ್ ಸ್ಫೋಟ ಕುರಿತು ಪ್ರತಿಕ್ರಿಯಿಸಿರುವ ಆ್ಯಪಲ್, ಫೋನ್ ಸ್ಫೋಟಗೊಳ್ಳಲು ಸಾಧ್ಯವೇ ಇಲ್ಲ. ನಮಗೆ ಇದು ಅನಿರೀಕ್ಷಿತ ಘಟನೆಯಾಗಿದೆ. ಕೂಡಲೇ ನಿಮ್ಮ ವಿವರಗಳನ್ನು ನಮ್ಮ ಬಳಿ ಹಂಚಿಕೊಳ್ಳಿ. ಈ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುತ್ತೇವೆಂದು ಹೇಳಿದೆ.
That's definitely not expected behavior. DM us, so we can look into this with you: https://t.co/GDrqU22YpT
— Apple Support (@AppleSupport) November 14, 2018
ಸ್ಥಳೀಯ ಮಾಧ್ಯಮಗಳ ಮಾಹಿತಿಯಂತೆ, ಮೂಲತಃ ರಾಕಿ ಸಿರಿಯಾ ಮೂಲದವರಾಗಿದ್ದಾರೆ. ಇವರು ತಮ್ಮ 10 ತಿಂಗಳ ಐಫೋನನ್ನು ಐಓಎಸ್ 12 ಗೆ ಅಪ್‍ಡೇಟ್ ಮಾಡಲು ಮುಂದಾಗಿದ್ದರು. ಈ ವೇಳೆ ಮೊಬೈಲಿನ ತಾಪಮಾನ ಹೆಚ್ಚಾಗಿ, ಏಕಾಏಕಿ ಸ್ಫೊಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews