ಲಂಡನ್: ಐಫೋನ್ (iPhone) ಉತ್ಪಾದಿಸುವ ಅಮೆರಿಕದ ಆಪಲ್ (Apple) ಕಂಪನಿಗೆ ಯೂರೋಪಿಯನ್ ಯೂನಿಯನ್‌ನ (European Union) ಆಂಟಿಟ್ರಸ್ಟ್ ನಿಯಂತ್ರಕ ಭರ್ಜರಿ 1.84 ಬಿಲಿಯನ್ ಯುರೋ (ಅಂದಾಜು 16,584 ಕೋಟಿ ರೂ.) ದಂಡವನ್ನು ವಿಧಿಸಿದೆ.
ಸ್ಪರ್ಧಾತ್ಮಕ ನಿಯಮ ಉಲ್ಲಂಘಿಸಿ ಆ್ಯಪಲ್ ತನ್ನ ಉತ್ಪನ್ನಗಳಲ್ಲಿ ಸಂಗೀತ ಸೇವೆ ನೀಡುವ ಹಲವು ಕಂಪನಿಗಳ ಆಪ್‌ಗಳ ಸೇವೆ ನಿರ್ಬಂಧ ಹೇರಿ ತಾನು ಸೂಚಿಸಿದ ಉತ್ಪನ್ನಗಳನ್ನು ಮಾತ್ರ ಗ್ರಾಹಕರು ಬಳಸುವಂತೆ ಮಾಡಿದೆ. ಅನಾರೋಗ್ಯಕರ ಸ್ಪರ್ಧೆಗೆ ಉದಾಹರಣೆ ಎಂದು ಅಭಿಪ್ರಾಯಪಟ್ಟ ಒಕ್ಕೂಟ ಭಾರೀ ಪ್ರಮಾಣದ ದಂಡ ವಿಧಿಸಿದೆ. ಇದನ್ನೂ ಓದಿ: ಶೀಘ್ರವೇ ಭಾರತದಲ್ಲಿ ಪಿಕ್ಸೆಲ್ ಫೋನ್ ತಯಾರಿಸಲಿದೆ ಗೂಗಲ್
Advertisement
Advertisement
ಐದು ವರ್ಷದ ಹಿಂದೆ ಡಿಜಿಟಲ್ ಮ್ಯೂಸಿಕ್ (Digital Music) ಸೇವೆ ನೀಡುವ ಸ್ಪಾಟಿಫೈ (Spotify) ನೀಡಿದ ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಒಕ್ಕೂಟ ಈಗ ಅಂತಿಮ ನಿರ್ಧಾರ ಪ್ರಕಟಿಸಿದೆ.
Advertisement
ಒಂದು ದಶಕದವರೆಗೆ, ಆಪ್ ಸ್ಟೋರ್ ಮೂಲಕ ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ವಿತರಣೆಗಾಗಿ ಆಪಲ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್ ನಿಯಮಗಳ ಅಡಿಯಲ್ಲಿ ಈ ರೀತಿ ನಿರ್ಬಂಧ ಹೇರುವುದು ಕಾನೂನುಬಾಹಿರ ಎಂದು ಒಕ್ಕೂಟ ಹೇಳಿದೆ. ಇದನ್ನೂ ಓದಿ: ಎರಡನೇ ಐಫೋನ್ ಘಟಕ ತೆರೆಯಲು ಮಾತುಕತೆ ಆರಂಭಿಸಿದ ಟಾಟಾ
Advertisement
ಯಾವುದೇ ಕಂಪನಿಗೆ ಗ್ರಾಹಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಹಕನಿಗೆ ಏನು ಬೇಕೋ ಅದನ್ನು ಪಡೆಯಲು ಸ್ವಾತಂತ್ರ್ಯ ನೀಡಬೇಕು. ಬೇರೆ ಸೇವೆ ಬಳಸಲು ಅವಕಾಶ ನೀಡದೇ ತಾನು ನೀಡಿದ್ದನ್ನೇ ಬಳಸಬೇಕು ಎಂಬ ನೀತಿಯನ್ನು ಅಳವಡಿಸಿದವರಿಗೆ ಈ ತೀರ್ಪು ಪ್ರಬಲ ಸಂದೇಶವನ್ನು ಕಳುಹಿಸಿದೆ ಎಂದು ಸ್ಪಾಟಿಫೈ ತೀರ್ಪನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿದೆ.