ಬೆಂಗಳೂರು: ನಿಮಗೆಲ್ಲ ಆ್ಯಪಲ್ ಕೇಕ್ ಗೊತ್ತಿಲ್ಲದಿರಲು ಸಾಧ್ಯವಿಲ್ಲ. ಇದೀಗ ಅದೇ ಹೆಸರನ್ನಿಟ್ಟುಕೊಂಡ ಚಿತ್ರ ತಯಾರಾಗಿ ಬಿಡುಗಡೆಯ ಹೊಸ್ತಿಲಲ್ಲಿದೆ. ರಂಜಿತ್ ಕುಮಾರ್ ಗೌಡ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಅರವಿಂದ್ ಕುಮಾರ್ ಗೌಡ ನಿರ್ಮಾಣ ಮಾಡಿದ್ದಾರೆ.
ಆ್ಯಪಲ್ ಕೇಕ್ ಎಂಬುದು ಎಲ್ಲರಿಗೂ ಚಿರಪರಿಚಿತವಾಗಿರೋ ಬೇಕರಿ ಐಟಮ್. ರಾಗಿ ಮುದ್ದೆಯ ಜ್ಯೂನಿಯರ್ ವರ್ಷನ್ನಿನಂತೆ ಕಾಣೋ ಇದು ರುಚಿಯಲ್ಲೂ ಭಿನ್ನ. ಇದನ್ನು ಚಪ್ಪರಿಸಿ ತಿನ್ನೋ ಹೆಚ್ಚಿನವರಿಗೆ ಇದನ್ನು ಹೇಗೆ ತಯಾರಿಸುತ್ತಾರೆಂಬ ಅರಿವಿರಲಿಕ್ಕಿಲ್ಲ. ಇದನ್ನು ಬೇರೆ ಬೇರೆ ತಿನಿಸು ಮಾಡೋವಾಗ ಉಳಿದ, ಕೆಲವೊಮ್ಮೆ ಸೇಲಾಗದ ಪದಾರ್ಥಗಳನ್ನು ಸೇರಿಸಿ ಮಾಡಲಾಗುತ್ತದೆ. ಅವೆಲ್ಲವೂ ಒಟ್ಟಾಗಿ ಆ್ಯಪಲ್ ಕೇಕಾಗುತ್ತೆ. ಈ ಚಿತ್ರದಲ್ಲಿ ನಾನಾ ಥರದಲ್ಲಿ ರಿಜೆಕ್ಷನ್ನಿಗೊಳಗಾದ ನಾಲ್ಕು ಪಾತ್ರಗಳ ಸುತ್ತ ಕಥೆ ಸುತ್ತುತ್ತೆ. ಆದ್ದರಿಂದಲೇ ಅದಕ್ಕೆ ಹತ್ತಿರಾದ ಆ್ಯಪಲ್ ಕೇಕ್ ಎಂಬ ಹೆಸರಿಡಲಾಗಿದೆಯಂತೆ. ಪ್ರತೀ ಸೀನುಗಳಲ್ಲಿಯೂ ಈ ಬಗ್ಗೆ ಕ್ಲಾರಿಟಿಯೂ ಸಿಗಲಿದೆಯಂತೆ.
ಈ ಚಿತ್ರದಲ್ಲಿ ನಾಯಕ ನಾಯಕಿಯೆಂಬ ಮಾಮೂಲು ಸೂತ್ರವಿಲ್ಲ. ಇಲ್ಲೇನಿದ್ದರೂ ಕಥೆಯೇ ನಾಯಕ, ಅದುವೇ ನಾಯಕಿ ಎಂಬುದು ನಿರ್ದೇಶಕರ ಸ್ಪಷ್ಟನೆ. ಕರ್ನಾಟಕದ ನಾನಾ ದಿಕ್ಕಿನಿಂದ ನಾಲ್ಕು ಪಾತ್ರಗಳು ಮಾಯಾ ನಗರಿ ಬೆಂಗಳೂರಿಗೆ ಬಂದು ಸೇರುತ್ತವೆ. ಒಂದೆಡೆ ಸಂಧಿಸುತ್ತವೆ. ಅಲ್ಲಿಂದಲೇ ರೋಚಕ ಕಥೆ ಬಿಚ್ಚಿಕೊಳ್ಳುತ್ತದೆ. ಇದು ಬದುಕಿಗೆ ಹತ್ತಿರವಾದ, ಎಲ್ಲರನ್ನೂ ಕಾಡುವ ವಿಶಿಷ್ಟವಾದ ಕಥೆ ಹೊಂದಿರೋ ಚಿತ್ರ ಅನ್ನುತ್ತಾರೆ ನಿರ್ದೇಶಕ ರಂಜಿತ್.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews