ನವದೆಹಲಿ: ಆಪಲ್ ಐಫೋನ್ (Apple iphone) ದೇಶದ ಸ್ಪರ್ಧಾ ಕಾನೂನುಗಳನ್ನು ಉಲ್ಲಂಘಿಸಿರುವುದು ಭಾರತೀಯ ಸ್ಪರ್ಧಾತ್ಮಕ ಆಯೋಗ(CCI)) ತನಿಖೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.
ಸಿಸಿಐ ಕಳೆದ ವಾರ ಆಪಲ್ ಮತ್ತು ಆಪಲ್ ಇಂಟರ್‌ನ್ಯಾಶನಲ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ನೊಂದಿಗೆ ತನ್ನ ಗೌಪ್ಯ ವರದಿಯನ್ನು ಹಂಚಿಕೊಂಡಿದ್ದು ಪ್ರತಿಕ್ರಿಯೆ ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
Advertisement
ಇಲ್ಲಿಯವರೆಗೆ ಸಿಸಿಐ ಕಡೆಯಿಂದ ಅಧಿಕೃತವಾಗಿ ಐಫೋನ್ ಕಾನೂನು ಉಲ್ಲಂಘಿಸಿದ ಬಗ್ಗೆ ಯಾವುದೇ ವಿಚಾರ ಪ್ರಕಟವಾಗಿಲ್ಲ.
Advertisement
Advertisement
ಐಫೋನ್ ಮೇಲಿರುವ ಆರೋಪ ಏನು?
ಮುಖ್ಯವಾಗಿ ಡಿಜಿಟಲ್ ಕಂಟೆಂಟ್‌ಗೆ ಹಣ ಪಾವತಿಸಿ ಸೇವೆ ಪಡೆದುಕೊಳ್ಳುವ In-App Purchase (IAP) ವಿಷಯಯಕ್ಕೆ ಸಿಸಿಐ ತಕರಾರು ಎತ್ತಿದೆ. ಅಪ್ಲಿಕೇಶನ್‌ನಲ್ಲಿನ ಹೆಚ್ಚುವರಿ ವೈಶಿಷ್ಟ್ಯ ಅಥವಾ ಸೇವೆಯ ಖರೀದಿಗೆ 30% ವರೆಗೆ ಶುಲ್ಕ ಹೋಗುತ್ತಿದೆ. ಇದು ಭಾರತದ ಸ್ಪರ್ಧೆಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಪರಿಗಣಿಸಿದೆ.
Advertisement
ಬಳಕೆದಾರರು ಅಪ್ಲಿಕೇಶನ್ ಖರೀದಿಯನ್ನು ಮಾಡಲು ನಿರ್ಧರಿಸಿದಾಗ ಈ ಆಪ್ ಏನನ್ನು ಒಳಗೊಂಡಿದೆ ಎಂಬುದರ ವಿವರವಾದ ವಿವರಣೆಯನ್ನು ಅವರಿಗೆ ನೀಡಲಾಗುತ್ತದೆ. ಈ ಹಂತದಲ್ಲಿ ಬಳಕೆದಾರರು ಖರೀದಿಯೊಂದಿಗೆ ಮುಂದುವರಿಯಬಹುದು ಅಥವಾ ಖರೀದಿಸದೆಯೇ ಅಪ್ಲಿಕೇಶನ್‌ಗೆ ಹಿಂತಿರುಗಬಹುದು. ಎಲ್ಲಾ ಪಾವತಿಗಳನ್ನು ಅಪ್ಲಿಕೇಶನ್ ಸ್ಟೋರ್ ಮೂಲಕವೇ ಮಾಡಲಾಗುತ್ತದೆ. IAP ಗೆ ಒಪ್ಪಿಗೆ ನೀಡಿದರೆ ಹೆಚ್ಚುವರಿ ವೈಶಿಷ್ಟ್ಯಗಳು, ವಿಷಯ ಅಥವಾ ಸೇವೆಗಳು ಸಿಗುತ್ತದೆ.
2021 ರಲ್ಲಿ ಸಿಸಿಐ ತನಿಖೆ ಆರಂಭಿಸಿದಾಗ ಗ್ರಾಹಕರು ಡೌನ್‌ಲೋಡ್ ಮಾಡಲು ಮತ್ತು ಡಿಜಿಟಲ್ ವಿಷಯವನ್ನು ಖರೀದಿಸಲು ಸುರಕ್ಷಿತ ವೇದಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಆಪಲ್ ಸಮರ್ಥನೆ ನೀಡಿತ್ತು. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿಗಳ Work Culture ಹೊಗಳಿದ ಅಮೆಜಾನ್ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ
ದಂಡ ವಿಧಿಸಿದ್ದ ಯುರೋಪಿಯನ್ ಯೂನಿಯನ್
ಈ ಹಿಂದೆ ಐಫೋನ್ ಅಮೆರಿಕದ ಆಪಲ್ ಕಂಪನಿಗೆ ಯೂರೋಪಿಯನ್ ಯೂನಿಯನ್‌ನ (European Union) ಆಂಟಿಟ್ರಸ್ಟ್ ನಿಯಂತ್ರಕ ಭರ್ಜರಿ 1.84 ಬಿಲಿಯನ್ ಯುರೋ (ಅಂದಾಜು 16,584 ಕೋಟಿ ರೂ.) ದಂಡವನ್ನು ವಿಧಿಸಿತ್ತು.
ಸ್ಪರ್ಧಾತ್ಮಕ ನಿಯಮ ಉಲ್ಲಂಘಿಸಿ ಆ್ಯಪಲ್ ತನ್ನ ಉತ್ಪನ್ನಗಳಲ್ಲಿ ಸಂಗೀತ ಸೇವೆ ನೀಡುವ ಹಲವು ಕಂಪನಿಗಳ ಆಪ್‌ಗಳ ಸೇವೆ ನಿರ್ಬಂಧ ಹೇರಿ ತಾನು ಸೂಚಿಸಿದ ಉತ್ಪನ್ನಗಳನ್ನು ಮಾತ್ರ ಗ್ರಾಹಕರು ಬಳಸುವಂತೆ ಮಾಡಿದೆ.ಇದು ಅನಾರೋಗ್ಯಕರ ಸ್ಪರ್ಧೆಗೆ ಉದಾಹರಣೆ ಎಂದು ಅಭಿಪ್ರಾಯಪಟ್ಟ ಒಕ್ಕೂಟ ಭಾರೀ ಪ್ರಮಾಣದ ದಂಡ ವಿಧಿಸಿತ್ತು.
ಒಂದು ದಶಕದವರೆಗೆ, ಆಪ್ ಸ್ಟೋರ್ ಮೂಲಕ ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ವಿತರಣೆಗಾಗಿ ಆಪಲ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್ ನಿಯಮಗಳ ಅಡಿಯಲ್ಲಿ ಈ ರೀತಿ ನಿರ್ಬಂಧ ಹೇರುವುದು ಕಾನೂನುಬಾಹಿರ ಎಂದು ಒಕ್ಕೂಟ ಹೇಳಿತ್ತು.
ಐದು ವರ್ಷದ ಹಿಂದೆ ಡಿಜಿಟಲ್ ಮ್ಯೂಸಿಕ್ (Digital Music) ಸೇವೆ ನೀಡುವ ಸ್ಪಾಟಿಫೈ (Spotify) ನೀಡಿದ ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಒಕ್ಕೂಟ ಈಗ ಅಂತಿಮ ನಿರ್ಧಾರ ಪ್ರಕಟಿಸಿತ್ತು.
ಯಾವುದೇ ಕಂಪನಿಗೆ ಗ್ರಾಹಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಹಕನಿಗೆ ಏನು ಬೇಕೋ ಅದನ್ನು ಪಡೆಯಲು ಸ್ವಾತಂತ್ರ್ಯ ನೀಡಬೇಕು. ಬೇರೆ ಸೇವೆ ಬಳಸಲು ಅವಕಾಶ ನೀಡದೇ ತಾನು ನೀಡಿದ್ದನ್ನೇ ಬಳಸಬೇಕು ಎಂಬ ನೀತಿಯನ್ನು ಅಳವಡಿಸಿದವರಿಗೆ ಈ ತೀರ್ಪು ಪ್ರಬಲ ಸಂದೇಶವನ್ನು ಕಳುಹಿಸಿದೆ ಎಂದು ಸ್ಪಾಟಿಫೈ ತೀರ್ಪನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿತ್ತು.