ಧಾರ್ಮಿಕ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚುತ್ತಿದ್ದಂತೆಯೇ ಫೈಲ್ಸ್ ಹೆಸರಿನಲ್ಲಿ ಕೆಲ ಸಿನಿಮಾಗಳು ಸೆಟ್ಟೇರಿವೆ. ಮಲಯಾಳಂ ಸಿನಿಮಾ ರಂಗದಲ್ಲಿ ‘ದಿ ಕೇರಳ ಸ್ಟೋರಿ’ ಹೆಸರಿನಲ್ಲಿ ಸಿನಿಮಾ ಸಿದ್ಧವಾಗಿದ್ದು, ಅದು ಬಿಡುಗಡೆಗೂ ತಯಾರಿ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿಗಳಿಗೆ ಕೆಲವರು ಮನವಿ ಮಾಡಿದ್ದಾರೆ.
Advertisement
ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಇದು ಒಳಗೊಂಡಿದೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಈ ಟೀಸರ್ ನಲ್ಲಿ ವಿವಾದಿತ ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇದೆ. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ
Advertisement
Advertisement
ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Advertisement
ಈ ಸಿನಿಮಾವನ್ನು ಬ್ಯಾನ್ ಮಾಡುವ ಕುರಿತಾಗಿ ಮಾತನಾಡಿರುವ ಸಿನಿಮಾದ ನಿರ್ಮಾಪಕ ವಿಫುಲ್ ಶಾ, ‘ನಾವು ಸಿನಿಮಾದಲ್ಲಿ ಯಾವುದನ್ನೂ ಸುಳ್ಳು ಹೇಳಿಲ್ಲ. ಎಲ್ಲದಕ್ಕೂ ನಮ್ಮ ಹತ್ತಿರ ಸಾಕ್ಷಿ ಇವೆ. ಯಾರೇ ಪ್ರಶ್ನೆ ಮಾಡಿದರೂ ನಾವು ಉತ್ತರಿಸುತ್ತೇವೆ. ನಿಮಗೆ ಬೇಕಾಗಿರುವ ಸಾಕ್ಷಿ ಏನು ಅಂತ ವಿವರಿಸಿ’ ಎಂದಿದ್ದಾರೆ. ಇದು ಸತ್ಯದ ದರ್ಶನವಾಗಿದ್ದರಿಂದ ಸರಕಾರ ಬ್ಯಾನ್ ಮಾಡುವಂತಹ ಯೋಚನೆ ಮಾಡಲಾರದು ಎಂದು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.