ಬಿಗ್ ಬಾಸ್ (Bigg Boss Season 9) ಮನೆಯು ಕೆಲವರಿಗೆ ಪ್ರೇಮಿಗಳ ತಾಣವಾಗಿದ್ದರೆ, ಇನ್ನೂ ಕೆಲವರು ಬಾಂಧವ್ಯದ ಕೊಂಡಿಯಾಗಿ ಕಾಣುತ್ತಿದೆ. ಹೀಗಾಗಿಯೇ ಅಲ್ಲಿ ಪ್ರೇಮಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಅಪ್ಪ, ತಂಗಿ, ಅಣ್ಣ ಹೀಗೆ ಸಂಬಂಧಗಳು ಬೆಸೆಯುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಅದೆಷ್ಟೋ ಹುಡುಗಿಯರು ಅರುಣ್ ಅಣ್ಣನಾಗಿದ್ದರೆ, ಆರ್ಯವರ್ಧನ್ ಗುರೂಜಿ ತಂದೆಯ ರೀತಿಯಂತೆ ಕಾಣುತ್ತಿದ್ದಾರೆ. ಹಾಗಾಗಿಯೇ ದಿವ್ಯ ಉರುಡುಗ ಸೇರಿದಂತೆ ಹಲವರು ಗುರೂಜಿಗೆ ಅಪ್ಪಾಜಿ ಅಂತಾನೇ ಕರೆಯುತ್ತಿದ್ದಾರೆ.
ದಿವ್ಯಾ ಉರುಡುಗ ಅವರು ಗುರೂಜಿಯನ್ನು (Aryavardhan Guruji) ಅಪ್ಪಾಜಿ ಎಂದು ಕರೆದರೆ, ಗುರೂಜಿ ಕೂಡ ದಿವ್ಯಾರನ್ನು ಮಗಳೆ (Daughter) ಎಂದೇ ಕರೆಯುತ್ತಾರೆ. ಸದ್ಯ ಈ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿದೆ. ಹಾಗಾಗಿ ನಿನ್ನನ್ನು ನಾನು ಮಗಳೆ ಎಂದು ಕರೆಯಲಾರೆ ಅಂತ ಗುರೂಜಿ ಹೇಳಿದ್ದರೆ, ನಾನೂ ನಿಮ್ಮನ್ನು ಅಪ್ಪ ಅಂತ ಕರೆಯಲಾರೆ ಎಂದು ದಿವ್ಯಾ (Divya Uruduga) ಕೂಡ ಪ್ರತ್ಯುತ್ತರ ನೀಡಿದ್ದಾರೆ. ಟಾಸ್ಕ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಈ ಮಾತು ಕೇಳಿ ಬಂದಿದೆ. ಇದನ್ನೂ ಓದಿ : ಕನ್ನಡದ ನಟಿ ದಿವ್ಯಾ ಶ್ರೀಧರ್ ಲವ್ ಜಿಹಾದ್ ಆರೋಪಕ್ಕೆ ಪತಿ ಅಮ್ಜಾದ್ ಖಾನ್ ಪ್ರತಿಕ್ರಿಯೆ
ಮೊನ್ನೆ ನಡೆದ ತುಲಾಭಾರ ಟಾಸ್ಕ್ ನಲ್ಲಿ ಆರ್ಯವರ್ಧನ್ ಗುರೂಜಿಗೆ ‘ನಿಮ್ಮಲ್ಲಿ ರಾಕ್ಷಸಿ ಗುಣವಿದೆ’ ಎಂದು ಜರಿದಿದ್ದರು. ಅದರಂತೆ ಕುಪಿತಗೊಂಡ ಗುರೂಜಿ, ತಮ್ಮ ನೋವನ್ನು ತೋಡಿಕೊಂಡಿದ್ದರಂತೆ. ಆಗ ‘ಮಗಳೆ ಅನ್ನುವುದನ್ನು ನಿಮ್ಮಿಂದ ಕಿತ್ತಾಕಿದ್ದೇನೆ, ಇನ್ಮುಂದೆ ನನ್ನನ್ನು ಹಾಗೆ ಕರೆಯಬೇಡಿ’ ಎಂದು ಹೇಳಿದ್ದರು ದಿವ್ಯಾ. ಸಂಬರ್ಗಿಯಿಂದ (Prashant Sambargi) ತಂಗಿ ಪದ ಕಿತ್ತು ಹಾಕಿದೆ. ನನ್ನಿಂದ ಮಗಳು ಪದ ಕಿತ್ತ್ ಹಾಕಿದೆ. ಏನೆಲ್ಲ ಕಿತ್ತಾಕ್ತಿದ್ಯಾ ಎಂದು ಗುರೂಜಿ ತಮಾಷೆ ಮಾಡಿದ್ದರು.
ದಿವ್ಯಾ ಕೋಪ ಮಾಡಿಕೊಂಡು ಮಗಳು ಅಂತ ಕರೆಯಬೇಡಿ ಎಂದು ಗುರೂಜಿಗೆ ಹೇಳಿದ್ದರೂ, ಗುರೂಜಿ ಮಾತ್ರ ಈಗಲೂ ಮಗಳೇ ಅಂತಾನೇ ಕರೆಯುತ್ತಿದ್ದಾರೆ. ದಿವ್ಯಾಗೆ ಮಗಳು ಅಂತ ಕರೆದರೆ, ರೂಪೇಶ್ ಶೆಟ್ಟಿಗೆ ಮಗನ ಸ್ಥಾನ ಕೊಟ್ಟಿದ್ದಾರೆ. ವಯಸ್ಸಿನ ಅಂತವರನ್ನೂ ಲೆಕ್ಕಿಸದೇ ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಆರ್ಯವರ್ಧನ್ ಗುರೂಜಿ.