ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

Public TV
1 Min Read
Appachu Ranjan 1

ಮಡಿಕೇರಿ: ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

petrol price 1 1 medium

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪೆಟ್ರೋಲ್, ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪ್ರತಿ ಲೀಟರ್ ಗೆ 20 ರೂಪಾಯಿ ಕಡಿಮೆ ಆಗುತ್ತೆ. ಆದರೆ ಇದರಿಂದ ರಾಜ್ಯಗಳ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಹೀಗಾಗಿ ಜಿಎಸ್‍ಟಿ ವ್ಯಾಪ್ತಿಗೆ ತರುವುದನ್ನು ರಾಜ್ಯಗಳು ವಿರೋಧಿಸುತ್ತಿವೆ. ಆದರೆ ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಾದಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದರು. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲು

ದೇಶದಲ್ಲಿ ತೈಲ ಬೆಲೆ ಏರಿಕೆ ಅಗುತ್ತಿರುವ ಕಾರಣ ಕೋವಿಡ್ ಬಂದ ಬಳಿಕ ಈಗಾಗಲೇ ವ್ಯಾಕ್ಸಿನ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅದಕ್ಕೆಲ್ಲಾ ಹಣ ಬೇಕಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ ತಿಳಿಸಿದರು.

ಈ ಹಿಂದೆ ದೇಶವನ್ನಾಳಿದ ಸರ್ಕಾರಗಳು ಅರಬ್ ದೇಶಗಳಲ್ಲಿ ಆಯಿಲ್ ಬಾವಿಗಳನ್ನು ಖರೀದಿಸಬೇಕಾಗಿತ್ತು. ಅಂದು ಖರೀದಿಸಿದ್ದರೆ ಇಂದು ಅನುಕೂಲವಾಗುತಿತ್ತು. ಕಚ್ಚಾತೈಲ ಬೆಲೆ ಜಾಸ್ತಿಯಾದಾಗ ನಮ್ಮ ಬಾವಿಗಳಿಂದಲೇ ತೈಲ ಪೂರೈಸಬಹುದಾಗಿತ್ತು. ಇನ್ನಾದರೂ ಅರಬ್ ದೇಶಗಳಲ್ಲಿ ತೈಲ ಬಾವಿಗಳ ಖರೀದಿಸುವ ಕೆಲಸವಾಗಬೇಕಿದೆ. ಅಷ್ಟೇ ಅಲ್ಲದೆ ಗ್ಯಾಸ್ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುವ ಚಿಂತನೆ ಮೋದಿ ಅವರು ಮಾಡಿದ್ದಾರೆ ಎಂದು ಹೇಳಿದರು.

Share This Article