ಮಡಿಕೇರಿ: ಮಡಿಕೇರಿಯಲ್ಲಿ ನಡೆದ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಸೋಮವಾರಪೇಟೆಯಲ್ಲಿ ಮಾತನಾಡಿದ ಅವರು, ಮಡಿಕೇರಿಯಲ್ಲಿ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರೇ ಮಡಿಕೇರಿಯಲ್ಲಿ ನನ್ನ ಕಾರಿಗೆ ಯಾವುದೇ ಮೊಟ್ಟೆ ಎಸೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯನವರೇ ಹೇಳಿದ ಮೇಲೆ ಮೊಟ್ಟೆಯ ಪ್ರಶ್ನೆ ಮತ್ತೆ ಬರುವುದಿಲ್ಲ. ಸಿದ್ದರಾಮಯ್ಯ ಅವರೆ ಮಡಿಕೇರಿಯಲ್ಲಿ ಮೊಟ್ಟೆ ಬಿಸಾಡಿಲ್ಲ ಅಂದ ಮೇಲೆ ನಾನ್ಯಾಕೆ ಬಿಸಾಡಿದ್ದಾರೆ ಅನ್ನಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಕೊಡಗಿನ 2 ಕಡೆ ಮೊಟ್ಟೆ ದಾಳಿ
Advertisement
Advertisement
ಇದೀಗ ವೈರಲ್ ಆಗುತ್ತಿರುವ ವೀಡಿಯೋ ಕುರಿತು ಯಾವುದೇ ಮಾಹಿತಿ ನನಗೆ ಇಲ್ಲ. ಗುಡ್ಡೆಹೋಸೂರಿನಲ್ಲಿನ ಘಟನೆ ಮಾತ್ರ ನನಗೆ ಗೊತ್ತಿದೆ. ಈಗಾಗಲೇ ಗುಡ್ಡೆಹೋಸೂರಿನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ನಾನು ಕಾಂಗ್ರೆಸ್ಸಿನವನು ಎಂದೇ ಹೇಳಿದ್ದಾನೆ. ಇದಕ್ಕೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯಿಸಿ, ಸಂಪತ್ ನಮ್ಮವನಲ್ಲ ಎಂದು ಹೇಳಿದ್ದರು. ಆದರೆ ಜೀವಿಜಯ ಅವರೊಂದಿಗೆ ಸಂಪತ್ ಇರುವ ಫೋಟೋ ಕೂಡ ವೈರಲ್ ಆಗಿದೆ. ಕಾಂಗ್ರೆಸ್ಸಿನವನು ಅಂತ ಅವನೇ ಹೇಳಿದ ಮೇಲೆ ಸಂಪತ್ ಕಾಂಗ್ರೆಸ್ಸಿಗನಲ್ಲ ಎಂದು ಅವರು ಹೇಳಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ 3 ದಿನ ನಿಷೇಧಾಜ್ಞೆ- ಮದ್ಯ ಮಾರಾಟ ನಿಷೇಧ