ಕಾಲೇಜಿಗೆ ಹೋಗುವಾಗ ಜಡೆ ಎಳೆದು, ಅಶ್ಲೀಲ ಮಾತುಗಳನ್ನಾಡಿ ಕಿರುಕುಳ- ವಿದ್ಯಾರ್ಥಿನಿ ಆತ್ಮಹತ್ಯೆ

Public TV
1 Min Read
CTD GIRL

ಚಿತ್ರದುರ್ಗ: ಪುಂಡರ ಕಿರುಕುಳದಿಂದ ನೊಂದ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ರಾಧಿಕಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆ ಗ್ರಾಮದ ಮನೆಯಲ್ಲಿ ರಾಧಿಕಾ ನೇಣಿಗೆ ಕೊರಳೊಡಿದ್ದಾಳೆ.

CTD GIRL SUICIDE 1

ಮುದ್ದಪ್ಪ, ಸುದೀಪ್, ಕೋಟಿ, ಅಭಿ ಎಂಬವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಾಲೇಜಿಗೆ ಹೋಗುವಾಗ ಬರುವಾಗ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದಾರೆ. ಜಡೆ ಹಿಡಿದು ಎಳೆಯುವುದು, ಅಶ್ಲೀಲವಾಗಿ ಮಾತಾಡಿ ಕಿರುಕುಳ ಕೊಡುತ್ತಿರುವುದಾಗಿ ಆರೋಪಿಸಲಾಗಿದೆ.

CTD GIRL SUICIDE 2

ಈ ಬಗ್ಗೆ ಪೋಷಕರ ಬಳಿ ರಾಧಿಕಾ ಹೇಳಿಕೊಂಡಿದ್ದಳು. ಮೃತ ಬಾಲಕಿಯ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಶೀಘ್ರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಇದನ್ನೂ ಓದಿ: ಮನೆಗೆ ತಡವಾಗಿ ಬಂದ ತಮ್ಮನನ್ನು ಅಣ್ಣ ಪ್ರಶ್ನಿಸಿದ್ದೇ ತಪ್ಪಾಯ್ತು!

CTD GIRL SUICIDE 3

Share This Article