ತಮಿಳುನಾಡಲ್ಲಿ ನಮ್ಮ ಸರ್ಕಾರ ಫಿಕ್ಸ್‌ ಎಂದ TVK

1 Min Read

ಚೆನ್ನೈ: ತಮಿಳುನಾಡಲ್ಲಿ TVK ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕ ಫೆಲಿಕ್ಸ್ ಜೆರಾಲ್ಡ್ ಹೇಳಿದ್ದಾರೆ. ಬೆಳಗ್ಗೆ 11:15 ಗಂಟೆ ಸುಮಾರಿಗೆ ಟಿವಿಕೆ 105, ಆಡಳಿತ ಪಕ್ಷ ಡಿಎಂಕೆ (DMK) 50 ಎಐಎಡಿಎಂಕೆ ಮೈತ್ರಿಕೂಟ 77 ಸ್ಥಾನಗಳು ಹಾಗೂ ಇತರೇ 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

ವಿಜಯ್‌ ನಿವಾಸಕ್ಕೆ ಹೆಚ್ಚಿನ ಅಭಿಮಾನಿಗಳು ಬರುವ ನಿರೀಕ್ಷೆ ಇರುವುದರಿಂದ ಪಣಯೂರ್ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಜಯ್ ಅವರ ಪಣಯೂರ್ ನಿವಾಸದ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates

ಪಣಯೂರ್ ನಿವಾಸದ ಹೊರಗೆ ಜಮಾಯಿಸಿರುವ ಅಭಿಮಾನಿಗಳಲ್ಲಿ ಒಬ್ಬರು ಮಾಧ್ಯಮಗಳ ಜೊತೆ ಮಾತನಾಡಿದ್ದು, ನಾನು ವಿಜಯ್ ಅವರ ದೊಡ್ಡ ಅಭಿಮಾನಿ. ನಾವು ಅವರನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ಟಿವಿಕೆ ಈಗ ಮುನ್ನಡೆಯಲ್ಲಿದೆ. ನಾವು 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ನಮಗೆ ವಿಜಯ್ ಬಗ್ಗೆ ತುಂಬಾ ಹೆಮ್ಮೆ ಇದೆ. ಎಲ್ಲರೂ ಬದಲಾವಣೆಯನ್ನು ಬಯಸುತ್ತಿದ್ದಾರೆ. ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ತಮಿಳುನಾಡು
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್‌ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.

ಕಳೆದ ಚುನಾವಣೆಯಲ್ಲಿ 10 ವರ್ಷಗಳ ನಂತರ ಎಐಎಡಿಎಂಕೆ (AIADMK) ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು. ಡಿಎಂಕೆ ಮೈತ್ರಿಕೂಟ: 159 ಸ್ಥಾನಗಳು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು). ಎಐಎಡಿಎಂಕೆ ಮೈತ್ರಿಕೂಟ: 75 ಸ್ಥಾನ ಗೆದ್ದಿದ್ದವು.

Share This Article