ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(SIT) ತನಿಖೆ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಸ್ವಾಗತ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದಾರೆ.
ನಾವು ಯಾವಾಗಲೂ ಒಳ್ಳೆಯದನ್ನೇ ಮಾಡುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಆಭಾರಿ, ಎಸ್‌ಐಟಿ ರಚಿಸಿದ ಕಾರಣ ಸತ್ಯ ಹೊರಬರುತ್ತಿದೆ: ವೀರೇಂದ್ರ ಹೆಗ್ಗಡೆ
ಇನ್ನೊಂದೆಡೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ಯಾರಿಗೂ ತೊಂದರೆ ಬಯಸುವುದಿಲ್ಲ.ಕಾನೂನಿನ ಚೌಕಟ್ಟಿನೊಳಗೆ ಏನು ನ್ಯಾಯ ಒದಗಿಸಬೇಕೋ ಅದನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ
ತಪ್ಪು ಮಾಡಿದವರಿಗೂ ಕಾನೂನು ರೀತಿಯಲ್ಲಿ ಕ್ರಮ ವಹಿಸಲಾಗುತ್ತದೆ. ಇವತ್ತಿನವರೆಗೂ ನಾವು ಧರ್ಮಸ್ಥಳ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿಲ್ಲ.ನಾವು ಕೂಡ ಅಧಿಕಾರಿಗಳ ಬಳಿ ಏನು ಅಂತಾ ಕೇಳಿಲ್ಲ. ಇಷ್ಟು ದಿನಗಳ ಕಾಲ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ನಾವು ಮಾತಾಡಿದ್ದೇವೆ. ಮುಂದೆ ಅಂತಿಮವಾದ ವರದಿ ಬರಲಿ, ಆ ನಂತರ ಮಾತಾಡೋಣ ಎಂದು ಡಿಕೆಶಿ ಹೇಳಿದರು.