ಇಸ್ಲಾಮಾಬಾದ್: ವೈಭವ್ ಸೂರ್ಯವಂಶಿ (Vaibhav Suryavanshi) ಬ್ಯಾಟ್‌ನಲ್ಲಿ ಎಐ ಚಿಪ್ ಇರಬಹುದು, ಅವರನ್ನು ಲ್ಯಾಬ್ ಟೆಸ್ಟ್‌ಗೆ ಕಳುಹಿಸಿ ಎಂದು ಪಾಕಿಸ್ತಾನ ಕ್ರಿಕೆಟ್ ತಜ್ಞ (Pakistan cricket expert) ನೌಮನ್ ನಿಯಾಜ್ (Nauman Niaz) ಅವರು ತಮಾಷೆಯಾಗಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಆನ್‌ಲೈನ್ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಎಲ್ಲೆಡೆ ಪ್ರಶಂಸೆ ಪಡೆದಿದ್ದಾರೆ. ಆ ಬಾಲಕ ಆಟವಾಡುವಾಗ ಶಕ್ತಿ ಹೆಚ್ಚಿಸಿಕೊಳ್ಳಲು ಬ್ಯಾಟ್‌ನಲ್ಲಿ ಎಐ ಚಿಪ್ ಬಳಸಿರಬಹುದು. ಹೀಗಾಗಿ ಆತನನ್ನು ಲ್ಯಾಬ್ ಟೆಸ್ಟ್‌ಗೆ ಕಳುಹಿಸಿ ಎಂದು ಹಾಸ್ಯಮಯವಾಗಿ ಹೇಳಿದ್ದಾರೆ. ಇದನ್ನೂ ಓದಿ:IPLನಲ್ಲಿ ಮತ್ತೊಂದು ರೆಕಾರ್ಡ್ ಬರೆಯಲು ಸಜ್ಜಾದ ಕೊಹ್ಲಿ - ಆ ದಾಖಲೆಗೆ ಬೇಕು ಕೇವಲ 11 ರನ್
ಆ 15 ವರ್ಷದ ಬಾಲಕ ಅದ್ಭುತವಾದ ಆಟಗಾರ. ಭವಿಷ್ಯದಲ್ಲಿ ಸ್ಟಾರ್ ಆಟಗಾರನಾಗುತ್ತಾನೆ. ವೈಭವ್ ಕ್ರೀಸ್‌ಗೆ ಹೋದಾಗಲೆಲ್ಲ ಟಾಪ್ ಬೌಲರ್ ಹಾಗೂ ಬ್ಯಾಟ್ಸ್‌ಮ್ಯಾನ್‌ಗಳಿಗೆ ವಿಭಿನ್ನ ಚಮಕ್ ಕೊಡುತ್ತಾರೆ. ಮೊದಲ ಎಸೆತದಿಂದಲೇ ದಾಳಿ ಶುರುಮಾಡುವ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚಿಸಲ್ಪಡುವ ಯುವ ಕ್ರಿಕೆಟಿಗನಾಗಿದ್ದಾರೆ ಎಂದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ (ಏ.25) ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 37 ಎಸೆತಗಳಲ್ಲಿ 103 ರನ್ ಗಳಿಸಿ, ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ದಾಖಲಿಸಿದರು. ಈ ಮೂಲಕ ಐಪಿಎಲ್ 2026ರಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್‌ನಲ್ಲಿ ಅತ್ಯಧಿಕ ರನ್ ಗಳಿಸಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.ಇದನ್ನೂ ಓದಿ: ಅಭಿಷೇಕ್, ಕಿಶನ್ ಜವಾಬ್ದಾರಿ ಆಟ; ರಾಜಸ್ಥಾನ್ ವಿರುದ್ಧ ಹೈದರಾಬಾದ್‌ಗೆ 5 ವಿಕೆಟ್‌ಗಳ ಜಯ

