ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಕೇಸ್‌ – ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ

0 Min Read

ಬೆಂಗಳೂರು: ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ (Mangaluru cooker blast) ಪ್ರಕರಣದಲ್ಲಿ ಉಗ್ರ ಶಾರಿಕ್‌ಗೆ (Mohammed Shariq) 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ‌ ಸ್ಪೆಷಲ್ ಕೋರ್ಟ್‌ ಆದೇಶ ಹೊರಡಿಸಿದೆ.

ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೋರ್ಟ್‌ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ. ‘ಓರ್ವ ಮಗಳಿದ್ದಾಳೆ, ಮನೆಯಲ್ಲಿ ದುಡಿಯುವವನು ನಾನೊಬ್ಬನೇ.. ಹೀಗಾಗಿ ಶಿಕ್ಷೆ ಕಡಿಮೆ ಮಾಡುವಂತೆ’ ಶಾರಿಕ್ ಮನವಿ ಮಾಡಿದ್ದಾನೆ. ಅಲ್ಲದೇ, ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡುವಂತೆಯೂ ಶಾರಿಕ್ ಮನವಿ ಮಾಡಿದ್ದಾನೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

ಇದೇ ವೇಳೆ, ‘ಜೈಲಿಗೆ ಸೇರಿ ಮೂರು ವರ್ಷ ಆಯ್ತು.. ಔಷಧಿ ಎಲ್ಲಾ ಸರಿಯಾಗಿ ತೆಗೆದುಕೊಳ್ಳಲು ಆಗ್ತಾ ಇಲ್ಲ.. ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗ್ತಿಲ್ಲ.. ಹೀಗಾಗಿ, ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲು’ ಶಾರಿಕ್‌ ಕೋರ್ಟ್‌ ಮುಂದೆ ಬೇಡಿಕೊಂಡ.

ಆದರೆ, ಇದನ್ನು ಪುರಸ್ಕರಿಸದ ನ್ಯಾಯಾಧೀಶರು, ಬೆಂಗಳೂರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯ ಇದೆ.. ಶಿವಮೊಗ್ಗಕ್ಕಿಂತ ಚೆನ್ನಾಗಿಯೇ ಇದೆ ಎಂದು ಮನವಿಯನ್ನು ತಿರಸ್ಕರಿಸಿದರು. ಕೋರ್ಟ್‌ಗೆ ಮೂರು ತಿಂಗಳ ಹಿಂದೆ ಶಾರಿಕ್ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಶಾರಿಕ್ ಅರ್ಜಿ ಪುರಸ್ಕರಿಸಿದ್ದ ಎನ್‌ಐಎ ಸ್ಪೆಷಲ್ ಕೋರ್ಟ್ ಇಂದು ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ. ಇದನ್ನೂ ಓದಿ: ರಾಷ್ಟ್ರಧ್ವಜ ಕಂಡರೆ ಬೆಂಕಿ ಹಚ್ಚುತ್ತಿದ್ದ ಶಾರೀಕ್ ಗ್ಯಾಂಗ್

Share This Article