ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

1 Min Read

ಮುಂಬೈ: ಇಲ್ಲಿನ (Mumbai) ಪೈಧೋನಿ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಫುಡ್‌ ಪಾಯಿಸನ್‌ನಿಂದ (Food Poison) ಸಾವನ್ನಪ್ಪಿದ್ದಾರೆ.

ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್ ದೋಕಾಡಿಯಾ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯಿಷಾ (16) ಮತ್ತು ಜೈನಾಬ್ (13) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಹೇಳಿಕೆಗಳ ಪ್ರಕಾರ, ಅವರೆಲ್ಲ ಬಿರಿಯಾನಿ (Biryani) ಸೇವಿಸಿ, ನಂತರ ಕಲ್ಲಂಗಡಿ ಹಣ್ಣು (Watermelon) ತಿಂದಿದ್ದರು ಎಂದು ತಿಳಿದುಬಂದಿದೆ.

ಏ.ರ ರಾತ್ರಿ ಸುಮಾರು 10:30ಕ್ಕೆ ಸಂಬಂಧಿಗಳು ಸೇರಿದಂತೆ ಒಟ್ಟು ಒಂಬತ್ತು ಕುಟುಂಬ ಸದಸ್ಯರು ಒಟ್ಟಿಗೆ ಊಟ ಮಾಡಿದ್ದರು. ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು. ನಡುರಾತ್ರಿ 1:00 ರಿಂದ 1:30ರ ನಡುವೆ, ನಾಲ್ವರು ಕುಟುಂಬದ ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮದುವೆಯಾದ್ರೂ ಬಯಕೆಗೆ ಮಾತ್ರ ಬಳಸಿಕೊಳ್ತೀನಿ ಅಂತಿದ್ದ – ಅವಮಾನ ಸಹಿಸಲಾಗದೇ ಬೆಂಕಿಯಿಟ್ಟೆ: ಪ್ರೇಯಸಿ ತಪ್ಪೊಪ್ಪಿಗೆ

ಏ.26 ರಂದು ಮುಂಜಾನೆ ಸುಮಾರು 5:30 ರಿಂದ 6:00 ರವರೆಗೆ, ನಾಲ್ವರಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರಿಗೆ ಆರಂಭದಲ್ಲಿ ಕುಟುಂಬದ ವೈದ್ಯರು ಚಿಕಿತ್ಸೆ ನೀಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರೆಲ್ಲ ಸಾವನ್ನಪ್ಪಿದ್ದಾರೆ.

ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು (ಎಡಿ) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಮರದ ಬಾಕ್ಸ್‌ಗೆ ಹಾಕಿ ಸಿಮೆಂಟ್‌ ತುಂಬಿದ ಪತಿ – ಚೀಟಿಯ ಸುಳಿವಿಂದ ಪ್ರಕರಣ ಬಯಲಿಗೆ

Share This Article