UPSC ಪರೀಕ್ಷೆಯಲ್ಲಿ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅಂಕಲ್ ಪಾಸ್

1 Min Read

ನವದೆಹಲಿ: 2025ರ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Sooryavanshi) ಚಿಕ್ಕಪ್ಪ ಅಭಿಷೇಕ್ ಚೌಹಾಣ್ (Abhishek Chauhan) ಅವರು 102ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

- Advertisement -

ಭಾರತದ ಅಂಡರ್-19 ವಿಶ್ವಕಪ್ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಚಿಕ್ಕಪ್ಪ ಅಭಿಷೇಕ್ ಚೌಹಾಣ್ ಅವರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 102ನೇ ರ‍್ಯಾಂಕ್ ಪಡೆದಿದ್ದು, ಐಪಿಎಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ರ‍್ಯಾಂಕ್ ಗಿಟ್ಟಿಸಿಕೊಂಡ ಯಾದಗಿರಿಯ ನಾಲ್ವರು

- Advertisement -

- Advertisement -

ಬಿಹಾರದ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿರುವ ಅಭಿಷೇಕ್ ಅವರು ಪ್ರೊಫೆಸರ್ ಡಾ. ಅಭಯ್ ಕುಮಾರ್ ಸಿಂಗ್ ಮತ್ತು ಅನುರಾಧಾ ರಜಪೂತ್ ಅವರ ಪುತ್ರ. ಅವರ ತಂದೆ ನಳಂದ ಮುಕ್ತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಸಂತೋಷ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

- Advertisement -

2022ರಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭಿಷೇಕ್ ಅವರು 2025ರಲ್ಲಿ ಪ್ರಾಥಮಿಕ ಮತ್ತು ಮುಖ್ಯ ಹಂತಗಳೆರಡಲ್ಲಿಯೂ ತೇರ್ಗಡೆಯಾದರು.ಇದನ್ನೂ ಓದಿ: ಬೆಂಗಳೂರು| ಕಾಲು ಜಾರಿ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ – 8 ಗಂಟೆ ಗುಂಡಿಯಲ್ಲೇ ಪರದಾಟ

Share This Article