ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್

1 Min Read

ದಿತ್ಯ ಧಾರ್ ಅವರ ಧುರಂಧರ್ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ, ತಂಡವು ಈಗ ಮಾ.19 ರಂದು ‘ಧುರಂಧರ್: ದಿ ರಿವೆಂಜ್‌’ ರಿಲೀಸ್‌ಗೆ ಸಜ್ಜಾಗುತ್ತಿದೆ. ಧುರಂದರ್‌-2 ಟ್ರೈಲರ್‌ ರಿಲೀಸ್‌ ಆಗಿದ್ದು, ರಿವೇಂಜ್‌ ಮೋಡ್‌ನಲ್ಲಿ ರಣವೀರ್‌ ಸಿಂಗ್‌ ಮಿಂಚಿದ್ದಾರೆ.

- Advertisement -

ರೆಹಮಾನ್ ದಕೈತ್ (ಅಕ್ಷಯ್ ಖನ್ನಾ) ಮರಣದ ನಂತರ ಪಾಕಿಸ್ತಾನದ ಲಿಯಾರಿ ಪಟ್ಟಣದ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಣವೀರ್ ಸಿಂಗ್ ಮಾರಕ ಸೇಡಿನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ನಿಮಿಷ 25 ಸೆಕೆಂಡುಗಳ ಟ್ರೈಲರ್‌ ಭಯಾನಕವಾಗಿದೆ.

- Advertisement -

ಸಿನಿಮಾದ ಫಸ್ಟ್‌ ಪಾರ್ಟ್‌ ಪ್ರೇಕ್ಷಕರಿಗೆ ಎರಡು ಭಾಗಗಳ ಬೇಹುಗಾರಿಕೆಯ ಸಾಹಸಗಾಥೆಯನ್ನು ಪರಿಚಯಿಸಿತ್ತು. ಈ ಕಥೆಯು ಕರಾಚಿಯಲ್ಲಿ ರಹಸ್ಯವಾಗಿ ಕೆಲಸ ಮಾಡುವ ಭಾರತೀಯ ಗುಪ್ತಚರ ಕಾರ್ಯಕರ್ತನೊಬ್ಬ, ಭಾರತದ ಭದ್ರತೆಗೆ ಬೆದರಿಕೆ ಹಾಕುವ ಭಯೋತ್ಪಾದಕ ಗುಂಪನ್ನು ನಾಶಮಾಡಲು ಕ್ರಿಮಿನಲ್ ಜಾಲಗಳು ಮತ್ತು ರಾಜಕೀಯ ವಲಯಗಳನ್ನು ನ್ಯಾವಿಗೇಟ್ ಮಾಡುವುದನ್ನು ತೋರಿಸುತ್ತದೆ. ಧುರಂಧರ್ 2 ಪಾಕಿಸ್ತಾನದ ಭೂಗತ ಲೋಕದಲ್ಲಿ ಈಗ ದೃಢವಾಗಿ ನೆಲೆಗೊಂಡಿರುವ ರಹಸ್ಯ ಭಾರತೀಯ ಏಜೆಂಟ್ ಹಮ್ಜಾ ಅಲಿ ಮಜಾರಿಯೊಂದಿಗೆ ನಿರೂಪಣೆಯನ್ನು ಮುಂದುವರಿಸುತ್ತದೆ.

- Advertisement -

ರಣವೀರ್ ಸಿಂಗ್ ಹಿಂದೆಂದೂ ನೋಡಿರದ ಅವತಾರದಲ್ಲಿ ಖಡಕ್‌ ಆಗಿ ಕಾಣಿಸಿಕೊಂಡಿದ್ದಾರೆ. ಉತ್ಸಾಹಭರಿತ ಹಿನ್ನೆಲೆ ಸಂಗೀತವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಿದೆ. ಪಾರ್ಟ್‌ 2 ನಲ್ಲಿ ಕೋಪ, ರೋಷಾವೇಷ, ಹಿಂಸೆಯು ಮತ್ತಷ್ಟು ಭೀಕರವಾದಂತಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 19 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

- Advertisement -

Share This Article