ಬೆಂಗಳೂರು: ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಬಿಎಂಟಿಸಿ (BMTC) ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಕಂಠೀರವ ಸ್ಟುಡಿಯೋ (Kanteerava Studio) ರಸ್ತೆಯಲ್ಲಿ ನಡೆದಿದೆ.
ಬಿಎಂಟಿಸಿ ಚಾಲಕರಿಬ್ಬರು (BMTC Drivers) ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿಕೊಂಡು ರಂಪಾಟ ಮಾಡಿದ್ದಾರೆ. ಪ್ರಯಾಣಿಕರು ಬಸ್ ಮೂವ್ ಮಾಡುವಂತೆ ಎಷ್ಟೇ ಕೇಳಿಕೊಂಡರೂ ತಲೆಕೆಡಿಸಿಕೊಳ್ಳದೇ ಕಿತ್ತಾಡಿದ್ದಾರೆ.ಇದನ್ನೂ ಓದಿ: ಮಂಡ್ಯ | ಗಣೇಶ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕಿ ಹೃದಯಾಘಾತಕ್ಕೆ ಬಲಿ
ಚಾಲಕರಿಬ್ಬರ ಗಲಾಟೆ ನೋಡಿದ ಪ್ರಯಾಣಿಕರು ನೀವು ಹೀಗೆ ಮಾಡಿದರೆ ನಾವು ಯಾರಿಗೆ ಹೇಳಬೇಕು? ಯಾಕೆ ಗಾಡಿಯನ್ನು ಸೈಡ್‌ಗೆ ಹಾಕಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಕಿತ್ತಾಟದಿಂದ ಬೇಸತ್ತ ಪ್ರಯಾಣಿಕರು ವಿಡಿಯೋ ಮಾಡಿ ಚಾಲಕರ ಬೀದಿ ರಂಪಾಟವನ್ನು ಬಿಚ್ಚಿಟ್ಟಿದ್ದಾರೆ.ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ಅಚ್ಚುಮೆಚ್ಚಿನ ದೋಸೆ ಸವಿದ ಸಿಎಂ