ಬೆಂಗಳೂರು: ಹೈಕಮಾಂಡ್ ತೀರ್ಮಾನದಂತೆ ಪುತ್ರ ಸಮರ್ಥ್‌ಗೆ (Samarth Shamanur) ಟಿಕೆಟ್ ಘೋಷಣೆ ಆಗಿದೆ. ದಾವಣಗೆರೆ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಅಂತ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S.S.Mallikarjun) ತಿಳಿಸಿದ್ದಾರೆ.
ಪುತ್ರನ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ‘ಬಿ’ ಫಾರಂ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ನಮಗೆ ಟಿಕೆಟ್ ಕೊಟ್ಟಿದೆ. ಸಮರ್ಥ್‌ಗೆ ಟಿಕೆಟ್ ಘೋಷಣೆ ಆಗಿದೆ. ಸಿಎಂ, ಡಿಸಿಎಂ, ಸುರ್ಜೇವಾಲ, ಅಲ್ಪಸಂಖ್ಯಾತ ನಾಯಕರಿಗೆ ಧನ್ಯವಾದ ಹೇಳ್ತೀನಿ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಚರ್ಚೆ ಆಗಿದೆ. AICC, KPCC ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಒಟ್ಟಾಗಿ ಕೆಲಸ ಮಾಡ್ತೀವಿ ಎಂದರು. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ; ಶಾಮನೂರು ಮೊಮ್ಮಗನಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್
ನಿನ್ನೆಯ ಸಭೆಯಲ್ಲಿ ರಾಜಿ ಸಂಧಾನ ಮಾಡಿದ್ರು. ನಾವೆಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ವಿ. ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಯಾವುದೇ ಗೊಂದಲ ಇಲ್ಲ. ಅಣ್ಣ-ತಮ್ಮಂದಿರ ರೀತಿ ಇದ್ದೇವೆ ಎಂದು ಹೇಳಿದರು.
ನಾವು ಕಾಂಗ್ರೆಸ್ ಫ್ಯಾಮಿಲಿ. 40 ವರ್ಷಗಳಿಂದ ನಮ್ಮ ತಂದೆ ಕಾಂಗ್ರೆಸ್‌ಗೆ ದುಡಿದಿದ್ದಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳೋ ಹಕ್ಕಿದೆ. ಅಂತಿಮವಾಗಿ ಹೈಕಮಾಂಡ್ ಎಲ್ಲರ ಒಪ್ಪಿಗೆ ಪಡೆದು ಸಮರ್ಥ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಒಟ್ಟಾಗಿ ನಾವು ಕೆಲಸ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: 8,931 ದಿನಗಳ ಆಡಳಿತ; ಸಿಎಂ, ಪಿಎಂ ಆಗಿ ಮೋದಿ ಐತಿಹಾಸಿಕ ದಾಖಲೆ

