ಗ್ಯಾರಂಟಿಗಳ ಜಾರಿ ನಡುವೆ ಹೊಸ ಭರವಸೆ ಹುಟ್ಟಿಸುತ್ತಾ ರಾಜ್ಯ ಸರ್ಕಾರದ ಬಜೆಟ್?

By
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು 14ನೇ ಬಾರಿ ಬಜೆಟ್ (Budget 2023) ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಗ್ಯಾರಂಟಿಗಳೇ ಸವಾಲುಗಳಾಗಿವೆ. ಹಾಗಾಗಿ ಗ್ಯಾರಂಟಿಗಳನ್ನ ಜಾರಿಗೆ ಅನುದಾನ ಸರಿದೂಗಿಸುವ ಜೊತೆಗೆ ಹೊಸ ಭರವಸೆಗಳನ್ನು ಹುಟ್ಟಿಸುತ್ತಾ ಅನ್ನೋದು ಕುತೂಹಲವಾಗಿದೆ.

5 ಗ್ಯಾರಂಟಿ ಅನುಷ್ಠಾನದ ಹೊರೆಯೊಂದಿಗೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಜವಬ್ದಾರಿಯೂ ಸಿದ್ದರಾಮಯ್ಯ ಅವರ ಮೇಲಿದೆ. ಸಿಎಂ ಸಿದ್ದರಾಮಯ್ಯ ಮುಂದಿರುವ ಆರ್ಥಿಕ ಸಂಕಷ್ಟದ ಸವಾಲಿನಲ್ಲಿ ಬಜೆಟ್ ಗಾತ್ರ ಮತ್ತು ರಾಜ್ಯದ ಸಾಲದ ಹೊರೆ ಎರೆಡು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ- ಗ್ಯಾರಂಟಿ ಮಧ್ಯೆ ಹೆಚ್ಚಿದ ನಿರೀಕ್ಷೆ

ಕಳೆದ ಬಾರಿ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿಯವರಿಂದ 3.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಯಾಗಿತ್ತು. ಈ ಬಾರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಗಾತ್ರ 3 ಲಕ್ಷಣ 35 ಸಾವಿರದಿಂದ 40 ಸಾವಿರ ಕೋಟಿವರೆಗೂ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ 77,750 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮಾನ ಮರ್ಯಾದೆ, ಕೊಲೆಗಡುಕ, ಕಿತ್ತುಹೋದವರು – ಹೆಚ್‌ಡಿಕೆ Vs ಚಲುವರಾಯಸ್ವಾಮಿ

ಸಾಲದ ಮೊತ್ತ:
* 2012-13ರಲ್ಲಿ – 1 ಲಕ್ಷ ಕೋಟಿ ರೂ. ದಾಟಿತ್ತು
* 2016-17 ರಲ್ಲಿ – 2 ಲಕ್ಷ ಕೋಟಿ ರೂ ಮೀರಿತ್ತು
* 2019-20 ರಲ್ಲಿ – 3 ಲಕ್ಷ ಕೋಟಿ ರೂ ಮೀರಿತ್ತು
* 2020-21 ರಲ್ಲಿ – 4 ಲಕ್ಷ ಕೋಟಿ ದಾಟಿತ್ತು (ಕೋವಿಡ್ + ಪ್ರವಾಹದಿಂದ ಸಾಲದ ಪ್ರಮಾಣ ಹೆಚ್ಚಳ) ವಾಗಿತ್ತು
* 2022-23ರ ಅಂತ್ಯಕ್ಕೆ 5 ಲಕ್ಷ ಕೋಟಿ ಹೊಸ್ತಿಲಲ್ಲಿ ಬಂದು ನಿಂತಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್