ಕಲಬುರಗಿ| ಜಮೀನಿನಲ್ಲಿ ಯುವಕ ಅನುಮಾನಾಸ್ಪದ ಸಾವು – ಕೊಲೆ ಶಂಕೆ

0 Min Read

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ದೋಟಿಕೊಳ್ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವನ್ನಪ್ಪಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

- Advertisement -

ದೋಟಿಕೊಳ ಗ್ರಾಮದ ಜಮೀನಿನಲ್ಲಿ ಮಲಗಿದ ಯುವಕ ಅನುಮಾನಾಸ್ಪದವಾಗಿ ಸಾವಾಗಿದ್ದಾನೆ. ಶರಣು ಭಾಸಗಿ (25) ಮೃತ ಯುವಕ. ಹೊಲದಲ್ಲಿ ಬೆಳೆ ಕಾಯಲು ಜಮೀನಿನಲ್ಲಿಯೇ ಮಲಗಿದ್ದ. ದೋಟಿಕೋಳ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಬಾರದು ಅಂತ ಪಿಯುಸಿ ವಿದ್ಯಾರ್ಥಿನಿ ಮೇಲೆ ಸೋದರ ಮಾವನಿಂದ ಹಲ್ಲೆ

- Advertisement -

- Advertisement -

ಸ್ಥಳಕ್ಕೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳದ ಪರಿಶೀಲನೆ ನಡೆಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Share This Article